ಎನ್ ಶಾಮೀದ್ ತಾವರಗೇರಾ
ತಾವರಗೇರಾ : ರಕ್ತದಾನ ಮಾಡುವದರಿಂದ ಒಂದು ಜೀವಕ್ಕೆ ಜೀವದಾನ ಮಾಡಿದಂತೆ, ಒಂದು ಜೀವ ಉಳಿಸಿಕೊಳ್ಳಲು ರಕ್ತ ಅತೀ ಮುಖ್ಯವಾಗಿದೆ. ಯುವಕರು ಸ್ವಯಂ ಪ್ರೇರಿತರಾಗಿ ರಕ್ತಾದನ ಮಾಡಲು ಮುಂದೆ ಬರಬೇಕೆಂದು ಡಾ. ಕಾವೇರಿ ಶಾವಿ ಹೇಳಿದರು.
ಅವರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಟ್ಟಣ ಪಂಚಾಯತ್ ತಾವರಗೇರಾ, ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ರಕ್ತ ದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಪಟ್ಟಣ ಪಂಚಾಯತ ಅಧ್ಯಕ್ಷ ವಿಕ್ರಮ್ ರಾಯ್ಕರ್ ಉದ್ಘಾಟಿಸಿದರು. ಫಂ ಸದಸ್ಯ ಚಂದ್ರಶೇಖರ್ ನಾಲತವಾಡ, ಪಪಂ ಆರೋಗ್ಯ ಅಧಿಕಾರಿ ಪ್ರಾಣೇಶ ಬಳ್ಳಾರಿ, ಗವಿಶಿದ್ದಪ್ಪ ಕುಂಬಾರ, ಡಾ. ಪ್ರಶಾಂತ ತಾಳಿಕೋಟಿ, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಆಶಾ ಕಾರ್ಯಕರ್ತೆ ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.