ಎನ್ ಶಾಮೀದ ತಾವರಗೇರಾ
ತಾವರಗೇರಾ – ಸಮೀಪದ ಜೆ. ರಾಂಪೂರ ಗ್ರಾಮದಲ್ಲಿ ವಾರದೊಳಗೆ ಮೂರು ಎಮ್ಮೆ ಒಂದು ಎತ್ತು ನಾನಾ ರೋಗದಿಂದ ಮೃತಪಡುತ್ತಿದ್ದು, ಪಶು ಪಾಲನಾ ಇಲಾಖೆಯ ಅಧಿಕಾರಿಗಳ ನಿರ್ಲಕ್ಷಕ್ಕೆ ರೈತಾಪಿ ವರ್ಗ ಹಿಡಿ ಶಾಪ ಹಾಕುತ್ತಿದೆ. ತಲೆ ಹಲ್ಲಾಡಿಸುತ್ತಾ, ನರಳಿ ನರಳಿ ಮೃತಪಡುವ ಜಾನುವಾರುಗಳಿಗೆ ಬಂದಿರುವ ಖಾಯಿಲೆಯಾದರು ಏನು ಎನ್ನುವ ಚಿಂತೆಯ ಮಧ್ಯ ಗ್ರಾಮಸ್ಥರು ದಿನದೂಡುತಿದ್ದು, ಕುಷ್ಟಗಿ ಪಶು ಪಾಲನ ಸಹಾಯಕ ನಿರ್ದೇಶಕರ ಕಚೇರಿಗೆ ತೆರಳಿ ಮನವಿ ಪತ್ರ ನೀಡಿ. ಗ್ರಾಮದಲ್ಲಿ ಹಸುಗಳಿಗೆ ಹರಡಿರುವ ರೋಗ ಯಾವುದು ಎಂದು ಪರಿಶೀಲಿಸಿ, ಸಂಬಂಧಿಸಿದ ಅಧಿಕಾರಿಗಳನ್ನು ಗ್ರಾಮಕ್ಕೆ ಕಳುಹಿಸಿ, ಸೂಕ್ತ ಚಿಕಿತ್ಸೆ ನೀಡಲು ಜೆ.ರಾಂಪೂರ ಗ್ರಾಮದ ಗ್ರಾಪಂ ಸದಸ್ಯ ಹನುಮಂತ ಗುಡೂರ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.