ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಮುದಗಲ್ ಪಟ್ಟಣದ ಮೂಲಕ ಹಾದು ಹೋಗುವ ರಾಯಚೂರು -ಬೆಳಗಾವಿ ರಾಜ್ಯ ಹೆದ್ದಾರಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು,ರಸ್ತೆ ಕಾಮಗಾರಿಗೆ ಟೆಂಡರ್ ಕರೆದಿದ್ದೇವೆ ಎಂದು ಬರಿ ಬರವಸೆ ನೀಡುತ್ತಿದ್ದೂ ಕಾರ್ಯ ಮಾತ್ರ ಪ್ರಾರಂಭವಾಗಿಲ್ಲ ಎಂದು ಲಿಂಗಸುಗೂರು ಶಾಸಕ ಡಿ ಎಸ್ ಹೂಲಗೇರಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಧಿಕ್ಕಾರ ಕೂಗಿ ಶಾಸಕರೇ ಕಣ್ಮುಚ್ಚಿ ಕುಳಿತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಹೆದ್ದಾರಿಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚಾರ ಮಾಡಲು ಹರಸಾಹಸ ಪಡುವಂತಾಗಿದೆ.ಹಾಗೂ ಗುಂಡಿಗಳಿಂದ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಮಹಿಳೆಯರು ರಸ್ತೆಮೇಲೆ ಬಿದ್ದ ಉದಾಹರಣೆಗಳಿವೆ,
ಹಾಗೂ ದೊಡ್ಡ ಪ್ರಮಾಣದ ವಾಹನ ಸಂಚಾರ ಇರುವುದರಿಂದ ಅತಿಯಾದ ಧೂಳು ಬರುತ್ತಿದ್ದು ಸಾರ್ವಜನಿಕ ಇದರಿಂದ ರೋಗಕ್ಕೆ ಗುರಿಯಾಗುವ ಸಾಧ್ಯತೆಗಳಿವೆ,ಮುಖ್ಯ
ರಸ್ತೆಯ ಎಡಕ್ಕೆ ಬಲಕ್ಕೆ 50-50 ಅಡಿಯಲ್ಲಿ ಬರುವ ಕಟ್ಟಡಗಳನ್ನು ನೆಲಸಮಗೊಳಿಸಿ 10 ವರ್ಷ ಕಳೆದರೂ ರಸ್ತೆ ಕಾಮಗಾರಿ ಪ್ರಾರಂಭವಾಗಿಲ್ಲ ಪಟ್ಟಣದಲ್ಲಿ ದಿನೇ ದಿನೇ ಟ್ರಾಫಿಕ್ ಸಮಸ್ಯೆ ಉಂಟಾಗಿದೆ.ಆದಷ್ಟು ಬೇಗ ಈ ರಸ್ತೆ ಕಾಮಗಾರಿ ಪ್ರಾರಂಭ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಸ್ ಎ ನಯೀಮ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಮುದಗಲ್ ಉಪತಹಶೀಲ್ದಾರರ ಮೂಲಕ ರಾಯಚೂರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭ ಎಸ್ ಎನ್ ಖಾದ್ರಿ
ಮಹಾಂತೇಶ್ , ನಾಗರಾಜ್ ನಾಯಕ್ ,ವೀರುಪಾಕ್ಷಿ, ಅವೇಜ್ ಪಾಶ , ಅನಿಫ್ ಖಾನ್ , ಗ್ಯಾನಪ್ಪ , ಅಬ್ದುಲ್ ಮಜೀದ್ , ಶಾಮಿದ್ ಸಾಬ್ ,ಅಮೀನ್ ನದಾಫ್ , ಸಾಬೀರ್,ಇಸ್ಮಾಯಿಲ್ ಕೊಳ್ಳಿ , ರಹೀಮ್ ಇದ್ದರು.
ಮಹಾಂತೇಶ್ , ನಾಗರಾಜ್ ನಾಯಕ್ ,ವೀರುಪಾಕ್ಷಿ, ಅವೇಜ್ ಪಾಶ , ಅನಿಫ್ ಖಾನ್ , ಗ್ಯಾನಪ್ಪ , ಅಬ್ದುಲ್ ಮಜೀದ್ , ಶಾಮಿದ್ ಸಾಬ್ ,ಅಮೀನ್ ನದಾಫ್ , ಸಾಬೀರ್,ಇಸ್ಮಾಯಿಲ್ ಕೊಳ್ಳಿ , ರಹೀಮ್ ಇದ್ದರು.