ಎನ್ ಶಾಮೀದ್ ತಾವರಗೇರಾ
ತಾವರಗೇರಾ : ಪಟ್ಟಣದ ರೈತರೊಬ್ಬರು ದಾಳಿಂಬೆ ಬೆಳೆಯಲು ಬ್ಯಾಂಕಿನಿಂದ ಪಡೆದ ಐದು ಲಕ್ಷರೂ ಸಾಲವೀಗ ಬಡ್ಡಿ ಸೇರಿ 30 ಲಕ್ಷ ರೂ ಆಗಿದೆ, ಸಾಲ ಮರು ಪಾವತಿಸುವಂತೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ ಬ್ಯಾಂಕ್ ವ್ಯವಸ್ಥಾಪಕರು.
ಪಟ್ಟಣದ ರೈತ ಶಂಕ್ರಮ್ಮ ರುಕ್ಮಣ್ಣ ಉಪ್ಪಳ ಎನ್ನುವವರು 2008 ರಲ್ಲಿ ಸ್ಥಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ 5.81 ಲಕ್ಷ ರೂ ಸಾಲ ಪಡೆದಿದ್ದರು. ದೂಂಡಾಣು ಅಂಗಮಾರಿ ರೋಗಕ್ಕೆ ಬೆಳೆನಷ್ಟ ಉಂಟಾಗಿದ್ದರಿಂದ ಸಾಲ ಮರುಪಾವತಿಸಿರಲಿಲ್ಲ. ಅವರು ಪಡೆದ ಸಾಲವೀಗ ಬಡ್ಡಿ ಮೊತ್ತ ಸೇರಿ 30.10 ಲಕ್ಷರೂ ಆಗಿದೆ.ಸಹ ಸಾಲಗಾರರೆಂದು ಪ್ರಾಮಿಸರಿ ನೋಟಿಸ್ ಗೆ ಸಹಿ ಮಾಡಿದ ನಾದೀರ್ ಪಾಷಾ ಹಾಗೂ ಸಾಲಕ್ಕಾಗಿ ಅಡಮಾನ ಇಟ್ಟು ಜಮೀನು ಖರೀದಿಸಿರುವ ವಿಠಲ್ ಸಿಂಗ್ ರಾಮ್ ಸಿಂಗ್ ಗೂ ನೋಟಿಸ್ ಹೋಗಿದೆ.
ರಾಜ್ಯದ 13 ಜಿಲ್ಲೆಯ ದಾಳಿಂಬೆ ಬೆಳೆಗಾರರು ಕಳೆದ 15 ವರ್ಷಗಳಿಂದ ಸಾಲ ಮನ್ನಾಕ್ಕಾಗಿ ನಿರಂತರ ಹೋರಾಟ ಮಾಡುತ್ತ ಬಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ತಮ್ಮ ಅಧಿಕಾರಾವಧಿಯಲ್ಲಿ ಬಜೆಟ್ ನಲ್ಲಿ ದಾಳಿಂಬೆ ಬೆಳೆಗಾರರ ಸಂಕಷ್ಟ ಪರಿಹಾರಕ್ಕೆಂದು ಮೀಸಲಿಟ್ಟಿರುವ 150 ಕೋಟಿ ರೂಗಳನ್ನು ಹಾಲಿ ಮುಖ್ಯಮಂತ್ರಿ ಬೇರೆ ಇಲಾಖೆಗೆ ವರ್ಗಾವಣೆ ಮಾಡಿರುವದರಿಂದ ದಾಳಿಂಬೆ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ.
ದಾಳಿಂಬೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವ ಕಾರ್ಯವನ್ನು ಸರ್ಕಾರ ಮಾಡಬೇಕಿದೆ. ಎಂದು ಅಖಿಲ ಕರ್ನಾಟಕ ದಾಳಿಂಬೆ ಬೆಳೆಗಾರರ ರೈತರ ಹೋರಾಟ ಸಮೀತಿ ರಾಜಾಧ್ಯಕ್ಷ ಅಬ್ದುಲ್ ನಯೀಮ್ ಒತ್ತಾಯಿಸಿದ್ದಾರೆ.
– ಮೇಲಾಧಿಕಾರಿಗಳ ಆದೇಶದಂತೆ ನಮ್ಮ ಬ್ಯಾಂಕಿನ ಲೀಗಲ್ ಅಡ್ವೈಜರ್ ಅವರು ಸಾಲಗಾರರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
– ಚಂದ್ರಶೇಖರ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ತಾವರಗೇರಾ.
– ನಮ್ಮ ದಾಳಿಂಬೆ ಬೆಳೆಗೆ ದೂಂಡಾಣು ಅಂಗಮಾರಿ ರೋಗ ಬಂದು ಬೆಳೆನಷ್ಟ ಉಂಟಾಗಿದ್ದರಿಂದ ಸಾಲ ಮರುಪಾವತಿಸಿರಲಿಲ್ಲ.
– ಶಂಕ್ರಮ್ಮ ರುಕ್ಮಣ್ಣ ಉಪ್ಪಳ
ರೈತ ಮಹಿಳೆ ತಾವರಗೇರಾ.