ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಕಲಬುರ್ಗಿ ಈಶಾನ್ಯ ವಲಯ ಶಿಕ್ಷಣ ಇಲಾಖೆ ಆಯುಕ್ತ ನಿರ್ದೇಶಕರಾದ ಡಾಕ್ಟರ್ ಡಿ ಕೆ ಎಸ್ ವರ್ಧನ ಅವರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ವಿದ್ಯಾಗಮ ಟು ಪಾಯಿಂಟ್ ಝೀರೋ (2.0) ಕಾರ್ಯಕ್ರಮವನ್ನು ಖುದ್ದು ಪರಿಶೀಲಿಸಿದರು. ವಿದ್ಯಾ ಗಮ ಕಾರ್ಯಕ್ರಮ ಮಕ್ಕಳ ಹಾಜರಾತಿ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಎಲ್ಲ ಶಾಲೆಗಳಲ್ಲಿ ಕಡ್ಡಾಯ ವಾಗಿ ಸೋಪ್ ಬಳಸಬೇಕು ಮಕ್ಕಳ ಹಾಜರಾತಿಯನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಆಕರ್ಷಿತರಾಗಲು ಪ್ರೇರೇಪಿಸಬೇಕು ವೇಳಾಪಟ್ಟಿಯಂತೆ ಕಾರ್ಯಕ್ರಮವನ್ನು 10ನೇ ತರಗತಿವರೆಗೆ ಉತ್ತಮ ರೀತಿಯಲ್ಲಿ ನಡೆಸಲು ಸಲಹೆ ಸೂಚನೆಯನ್ನು ನೀಡಿದರು ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ ಚನಬಸಪ್ಪ ಹಾಗೂ ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು ಶ್ರೀಶೈಲ್ ಸೋಮನಕಟ್ಟಿ ಹಾಗೂ ಸಿಆರ್ ಪಿ ಗಳಾದ ಕಾಶಿನಾಥ್ ನಾಗರಿಕರ , ದಾವಲ್ ಸಾಬ್ , ಶರಣಪ್ಪ ತುಮರಿಕೊಪ್ಪ ಹಾಗೂ ಜಿಲ್ಲಾ ಹಿರಿಯ ಉಪನ್ಯಾಸಕರಾದ ವೆಂಕಟೇಶ್ ಕೊಂಕಲ್ ಹಾಜರಿದ್ದರು ಮತ್ತು ಕೊಪ್ಪಳ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಗುರುಪಾದಮ್ಮ ಭಂಡಾರಿ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಾಲರು, ಉಪಪ್ರಾಂಶುಪಾಲರು, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಈರಪ್ಪ ಸೂಡಿ ಶಿಕ್ಷಕರಾದ ಶರಣಪ್ಪ ದಂಡಿನ, ಪರಸಪ್ಪ ಹೊಸಮನಿ ಇದ್ದರು.