Thursday , September 19 2024
Breaking News
Home / Breaking News / ಶಾಂತಿ ಹಾಗೂ ನೆಮ್ಮದಿಯ ಜೀವನ ನಡೆಸಲು ಆಧ್ಯಾತ್ಮಿಕ ಜ್ಞಾನ ಅವಶ್ಯ – ಬಿ.ಕೆ.ಸುನಂದಾ

ಶಾಂತಿ ಹಾಗೂ ನೆಮ್ಮದಿಯ ಜೀವನ ನಡೆಸಲು ಆಧ್ಯಾತ್ಮಿಕ ಜ್ಞಾನ ಅವಶ್ಯ – ಬಿ.ಕೆ.ಸುನಂದಾ

ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಪಟ್ಟಣದ ಸೋಮವಾರಪೇಟೆಯ ಬಸವಣ್ಣನ ದೇವಸ್ಥಾನದಲ್ಲಿ  ಕಳೆದ 5 ದಿನಗಳಿಂದ  ಜನರಿಗೆ  ಸಾಯಂಕಾಲ ಐದು  ಗಂಟೆಯಿಂದ ಆರು ಗಂಟೆಯ ವರೆಗೆ   ಈಶ್ವರೀಯ  ಆಧ್ಯಾತ್ಮಿಕ ಜ್ಞಾನವದ ಕುರಿತು ಬಿ.ಕೆ.ಸುನಂದಾ ತಿಳಿಸಿಕೊಟ್ಟರು. ಕಾರ್ಯಕ್ರಮದ ಕುರಿತು ಮಾತನಾಡಿದ ಬಿ ಕೆ ಸುನಂದಾ ಇಂದಿನ ಆಧುನಿಕ ಒತ್ತಡದ ಜೀವನದಲ್ಲಿ ಯೋಗ , ಧ್ಯಾನಗಳಂತಹ ಆಧ್ಯಾತ್ಮಿಕ ಅಭ್ಯಾಸಗಳ ಅವಶ್ಯಕತೆಯಿದ್ದು, ಶಾಂತಿ ಹಾಗೂ ನೆಮ್ಮದಿಯ ಜೀವನ ನಡೆಸಲು ಈ ಆಧ್ಯಾತ್ಮಿಕ ಜ್ಞಾನ ಅವಶ್ಯವಾಗಿದೆ, ಸೋಮವಾರಪೇಟೆಯ ಮಹಿಳೆಯರು ಈ ಆಧ್ಯಾತ್ಮಿಕ ಜ್ಞಾನದ ಲಾಭವನ್ನು ಪಡೆದುಕೊಂಡದ್ದಾರೆ ಸಮಾಜದಲ್ಲಿ ಇಂತಹ ಜ್ಞಾನಪೂರ್ಣ ಕಾರ್ಯಕ್ರಮಗಳು ಮಾದರಿಯಾಗಿವೆ ಎಂದರು. ಈ ಸಂದರ್ಭ   ಪುರಸಭೆ ಸದಸ್ಯೆ ಜಯಶ್ರೀ ಶಂಕ್ರಪ್ಪ ಜೀಡಿ, ಮಹಿಳಾ ಟ್ರಸ್ಟ್ ನ ಕಾರ್ಯದರ್ಶಿ ಅನ್ನಪೂರ್ಣ ಮಲ್ಲಪ್ಪ ಕವಡಿಮಟ್ಟಿ , ನಿರ್ಮಲ ಈರಣ್ಣ ಜೀಡಿ, ಶೋಭಾ ಎಸ್ ಜೀಡಿ, ಲತಾ ವಿ ಜೀಡಿ, ಸುರೇಖಾ ಎಸ್ ಜೀಡಿ, ಶಿಕ್ಷಕಿಯಾರಾದ ಪಾರ್ವತಿದೇವಿ, ಉಮಾಮಹೇಶ್ವರಿ, ಸಾವಿತ್ರಿ ಜೀಡಿ , ಚೈತ್ರ ಜೀಡಿ, ಜಗದೇವಿ ಹಾಗೂ ಸೋಮವಾರಪೇಟೆಯ
ಮಹಿಳೆಯರು ಇದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!