ವರದಿ : ನಾಗರಾಜ್ ಎಸ್ ಮಡಿವಾಳರ್
ಲಿಂಗಸಗೂರು : ಲಿಂಗಸಗೂರು ಹೂಗಾರ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಾಲ್ಲೂಕು ಕಚೇರಿಯಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಸಾವಿತ್ರಿ ಬಾಯಿ ಪುಲೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿಶ್ರೀ ಮತಿ ಸಾವಿತ್ರಿ ಬಾಯಿಪುಲೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿ ಮಾತನಾಡಿದ ಬಸವರಾಜ್ ಹೂಗಾರ್ ಮಹಿಳೆಯರ ಶಿಕ್ಷಣಕ್ಕಾಗಿ ಮೊಟ್ಟ ಮೊದಲ ಬಾರಿಗೆ ಕ್ರಾಂತಿ ಮಾಡಿದ ಧೀರ ಮಹಿಳೆ ಶ್ರೀಮತಿ ಸಾವಿತ್ರಿ ಬಾಯಿ ಪುಲೆ. ಇಂತಹ ಒಬ್ಬ ದಿಟ್ಟ ಮಹಿಳೆ ನಮ್ಮ ಸಮಾಜದವರು ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಎನಿಸುತ್ತಿದೆ ಸಮಾಜದ ಕಟ್ಟ ಕಡೆಯ ಮಹಿಳೆಗೂ ಉಚಿತ ಶಿಕ್ಷಣ ದೊರೆಯಬೇಕು ಎಂಬ ಉದಾತ್ತ ಧ್ಯೇಯ ಹೊಂದಿದ್ದರು, ಇಂತಹ ಮಹಿಳೆಗೆ ಸಗಣಿ ಎರಚಿ ಅವಮಾನಿಸಲಾಯಿತು. ಆದರೂ ದೈರ್ಯಗುಂದದೇ ಹಿಡಿದ ಹಠ ಸಾಧಿಸಿ ಮಹಿಳಾ ಸಬಲೀಕರಣಕ್ಕೆ ಪುಲೆ ನಾಂದಿ ಹಾಡಿದ್ದಾರೆ ಎಂದರು.ಈ ಸಂದರ್ಭ ಸಮಾಜದ ತಾಲ್ಲೂಕು ಅಧ್ಯಕ್ಷ ಮಲ್ಲಪ್ಪ ಹೂಗಾರ, ಉಪಾಧ್ಯಕ್ಷ ಶಿವಮಹಾಂತೇಶ ಹೂಗಾರ, ವೀರಭದ್ರಪ್ಪ ಹೂಗಾರ, ವಿಶ್ವನಾಥ್ ಹೂಗಾರ, ಚಿದಾನಂದ ಹೂಗಾರ, ಮಹಾಂತೇಶ ಹೂಗಾರ, ಹನುಮೇಶ್ ಹೂಗಾರ ಉಪಸ್ಥಿತರಿದ್ದರು..