ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಶಾಲಾ,
ಕಾಲೇಜುಗಳು ಶುಕ್ರವಾರ
ಪ್ರಾರಂಭವಾದವು.
ಕಳೆದ 10-11 ತಿಂಗಳಿನಿಂದ ಕೊರೊನಾ ವೈರಸ್
ಭೀತಿಯಿಂದ ಮುಚ್ಚಲಾಗಿದ್ದ ಶಾಲೆ,
ಕಾಲೇಜುಗಳನ್ನು ಗುರುವಾರ ಸ್ಯಾನಿಟೈಜರ್
ಮಾಡಿ ಶುಚಿ ಗೊಳಸಿದ್ದರು. ಶುಕ್ರವಾರ ಶಾಲಾ
ಕಾಲೇಜುಗಳ ಕಂಬಕ್ಕೆ ಮತ್ತು ಗೇಟ್ ಗೆ
ತಳಿರು, ತೊರಣಗಳನ್ನು ಕಟ್ಟಿ
ಶಾಲೆಗಳನ್ನು ಶೃಂಗಾರಗೊಳಿಸಿ ವಿದ್ಯಾಗಮ
ಕಾರ್ಯಕ್ರಮ ಯೋಜನೆ ಅಡಿಯಲ್ಲಿ
ವಿದ್ಯಾರ್ಥಿಗಳನ್ನು ಶಿಕ್ಷಕರು
ಸ್ವಾಗತಿಸಿಕೊಂಡರು. ಕೊರೊನಾ
ಮುಂಜಾಗೃತ ಕ್ರಮವಾಗಿ ಪ್ರತಿಯೊಂದು
ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ,
ಸ್ಯಾನಿಟೈಜರ್ ಹಾಕಿ ಸಾಮಾಜಿಕಂತರ
ಕಾಪಾಡಿಕೊಂಡು ಸ್ವಾಗತಿಸಿದರು.
ಕರ್ನಾಟಕ ಪಬ್ಲೀಕ್ ಶಾಲೆಯ ಪ್ರಾಥಮಿಕ
ವಿಭಾಗದ ೦6 ಮತ್ತು ೦7 ನೇ ತರಗತಿಯ
ವಿದ್ಯಾರ್ಥಿಗಳನ್ನು ಶಾಲಾ ಪ್ರವೇಶ ದ್ವಾರದ
ಮುಂದೆ ನಿಂತುಕೊಂಡು ಸ್ವಾಗತಿಸಿಕೊಂಡರು. ಮುಖ್ಯಶಿಕ್ಷಕರಾದ
ಈರಪ್ಪ ಸೂಡಿ, ಸಹ ಶಿಕ್ಷಕರಾದ ಶ್ಯಾಮಣ್ಣ
ಉಪ್ಪಾರ, ಪರಸಪ್ಪ ಹೊಸಮನಿ, ದೊಡ್ಡಪ್ಪ
ಅಲಬನೂರು, ಮಲ್ಲಂಗಸಾ ವಾಲೇಕಾರ,
ಶರಣಬಸವ ದಂಡಿನ್, ಶಿಕ್ಷಕಿ ಬಸಮ್ಮ ಕೆಂಬಾವಿ
ಇದ್ದರು.
ಬಸವಣ್ಣ ಕ್ಯಾಂಪ್ : ಇಲ್ಲಿಯ ಸರ್ಕಾರಿ ಹಿರಿಯ
ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಗಮ
ಯೋಜನೆಯಡಿಯಲ್ಲಿ ಶಾಲೆ
ಪ್ರಾರೋಭತ್ಸವ ಕಾರ್ಯಕ್ರಮ ನಡೆಯಿತು.
ಮುಖ್ಯಶಿಕ್ಷಕಿ ಗುರುಪಾದಮ್ಮ ಭಂಡಾರಿ,
ಸಹ ಶಿಕ್ಷಕರು, ಶಿಕ್ಷಕಿಯರು
ವಿದ್ಯಾರ್ಥಿಗಳನ್ನು ಸ್ವಾಗತಿಸಿಕೊಂಡರು.
ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ,
ಸ್ಯಾನಿಟೈಜರ್ ಹಾಕಿ ಸಾಮಾಜಿಕ ಅಂತರ
ಕಾಪಾಡಿಕೊಂಡು ಸ್ವಾಗತಿಸಿದರು.