ನಾಗರಾಜ್ ಎಸ್ ಮಡಿವಾಳರ್
ಲಿಂಗಸಗೂರು : ತಾಲೂಕಿನ ಬೆಂಡೋಣಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರೈತರ ಅನುಕೂಲಕ್ಕಾಗಿ ಬಿತ್ತನೆ ಯಂತ್ರಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯತಿಥಿಯಾಗಿ ಆಗಮಿಸಿದ
ಸಂಸ್ಥೆಯ ಜಿಲ್ಲಾ ನಿರ್ದೇಶಕ ಸಂತೋಷ ಕುಮಾರ್ ರೈತರಿಗೆ ಬಿತ್ತನೆ ಯಂತ್ರದ ಪ್ರಯೋಜನ ಕುರಿತು ತಿಳಿವಳಿಕೆ ಮೂಡಿಸುವ ಪ್ರಯತ್ನ ನಡೆದಿದೆ. ಈ ಯಂತ್ರದ ಮೂಲಕ ಎಲ್ಲ ಬಿತ್ತನೆಬೀಜವನ್ನು ವೈಜ್ಞಾನಿಕ ಕ್ರಮದಲ್ಲಿ ಬಿತ್ತನೆ ಮಾಡಬಹುದು. ಬಿತ್ತನೆ ಯಂತ್ರದ ಮೂಲಕ 1 ಗಂಟೆಯಲ್ಲಿ 1 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಬಹುದು. ಇದಕ್ಕಾಗಿ ರೈತರು ಕೇವಲ ₹1800 ಬಾಡಿಗೆ ಪಾವತಿಸಿದರೆ ಸಾಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರೈತರಿಗೆ ಬಾಡಿಗೆ ಕೃಷಿ ಉಪಕರಣ ವಿತರಣೆಗಾಗಿ ಗುರಗುಂಟಾ ಹೋಬಳಿಯ ಹೊನ್ನಳ್ಳಿ ಗ್ರಾಮದಲ್ಲಿ ಕೇಂದ್ರ ತೆರೆಯಲಾಗಿದೆ ಕೇಂದ್ರಕ್ಕೆ ಭೇಟಿ ನೀಡಿ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. DHSC ಯೋಜನೆ ಅಧಿಕಾರಿ ಹರೀಶ್, ಸಹಾಯಕ ಕೃಷಿ ನಿರ್ದೇಶಕ ಮಹಾಂತೇಶ್ ಹಾವಲರ್, ಜಿ ಎಚ್ ಎಡಹಳ್ಳಿ ಹಿರಿಯ ಕೃಷಿ ವಿಜ್ಞಾನಿ, ಮಹಮ್ಮದ್ ಅಲ್ಲಿ , ಮೇಲ್ವಿಚಾರಕ ಪ್ರಭಾಕರ ಸ್ಥಳೀಯ ಸೇವಾ ಪ್ರತಿನಿಧಿ ಕುಸುಮ, ರೇಣುಕಾ ಇದ್ದರು.