Friday , November 22 2024
Breaking News
Home / Breaking News / ಕವಿತಾಳ ಪಟ್ಟಣದಲ್ಲಿ SFI 50 ವರ್ಷಾಚರಣೆ.

ಕವಿತಾಳ ಪಟ್ಟಣದಲ್ಲಿ SFI 50 ವರ್ಷಾಚರಣೆ.

 

ಕವಿತಾಳ : ಪಟ್ಟಣದ ತ್ರೈಯೆಂಬಕೇಶ್ವರ ದೇವಸ್ಥಾನದ ಆವರಣದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್‌ ( SFI ) ಕವಿತಾಳ ಘಟಕದ ವತಿಯಿಂದ ಎಸ್ಎಫ್ಐನ 50 ಸಂಭ್ರಮಾಚರಣೆಯ ಕಾರ್ಯಕ್ರಮ ವನ್ನು ಮಾಡಲಾಯಿತು.

ಮೊದಲ ಧ್ವಜಾರೋಹಣ ಮಾಡಿ ಘೋಷಣೆ ಯನ್ನು ಕೂಗಿ ನಂತರ ಕಾರ್ಯಕ್ರಮ ವನ್ನು ಆರಂಭಿಸಿದರು.

ನಂತರ SFI ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿ SFI ದೇಶದ ದೊಡ್ಡ ಮತ್ತು ಮಹತ್ವದ ವಿದ್ಯಾರ್ಥಿ ಸಂಘಟನೆಯಾಗಿದೆ ಕಳೆದ 50 ವರ್ಷಗಳಿಂದ ಸರ್ವರಿಗೂ ಸಮಾನ ಗುಣಮಟ್ಟದ ಶಿಕ್ಷಣ, ಉದ್ಯೋಗ ಕ್ಕಾಗಿ, ಶೈಕ್ಷಣಿಕ ಮತ್ತು ಸಾಮಾಜಿಕ ಸಮಸ್ಯೆ ವಿರುದ್ಧ ಹಾಗೂ ಶಿಕ್ಷಣದ ಉಳಿವಿಗಾಗಿ ಮತ್ತು ಸಬಲೀಕರಣ ಕ್ಕಾಗಿ ಜೊತೆಗೆ ದೇಶದ ಪ್ರಗತಿಗಾಗಿ ನಿತ್ಯವೂ ಹೋರಾಟ ಮಾಡುತ್ತಾ ಬರುತ್ತಿದೆ. ಅಭ್ಯಾಸ, ಹೋರಾಟ ಮತ್ತು ತ್ಯಾಗದ ಅಡಿಯಲ್ಲಿ, ಸಮಾನವಾದದ ಕಣೋಟದಲ್ಲಿ ಕೆಲಸ ಮಾಡುತ್ತಿರುವ ನಮ್ಮ ಸಂಘಟನೆಗೆ ಈಗ 50 ವರ್ಷಗಳು ತುಂಬಿರುವುದು ಸಂತೋಷ. ಹೋರಾಟದ ಹಾದಿಯಲ್ಲಿ ವ್ಯವಸ್ಥೆಯ ಬದಲಾವಣೆ ಗಾಗಿ SFI ಸಂಘಟನೆಯ 276 ಅಧಿಕ ಕಾರ್ಯಕರ್ತರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಇಂತಹ ಸಂಘಟನೆ ಯನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟಿ ಬೆಳಿಸಬೇಕಿದೆ ಎಂದರು.

ಪ್ರಾಸ್ತಾವಿಕವಾಗಿ SFI ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್ ಮಾತನಾಡಿ ಕವಿತಾಳ ದಲ್ಲಿ ಕಳೆದ ಹತ್ತು ವರ್ಷಗಳಿಂದ SFI ಶೈಕ್ಷಣಿಕ ಮತ್ತು ಊರಿನ ಪ್ರಗತಿಗಾಗಿ ಹೋರಾಟ ಮಾಡುತ್ತಿದೆ. ನಮ್ಮ ಹೋರಾಟದ ಪ್ರತಿಫಲವಾಗಿ ಪಟ್ಟಣಕ್ಕೆ ಪದವಿ ಸಹಿತ ವಸತಿ ಕಾಲೇಜು, ವಿಜ್ಞಾನ ಮತ್ತು ವಾಣಿಜ್ಯ ವಿಭಾಗ, ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ವಂತ ಕಟ್ಟಡ ಸಿಕ್ಕಿದ್ದು ಇದಲ್ಲದೆ ಸಾರ್ವಜನಿಕ ವಲಯದಲ್ಲಿ ಇಲ್ಲಿನ ಭ್ರಷ್ಟಾಚಾರ ಮತ್ತು ಮೂಲಭೂತ ಸೌಕರ್ಯ ಗಳಿಗಾಗಿ ಸಾಕಷ್ಟು ಹೋರಾಟ ವಿವಿಧ ಕಾರ್ಯಕ್ರಮ ಗಳನ್ನು ಮಾಡಿ ಯಶಸ್ಸು ಕಂಡಿದೆ ಎಂದರು.

ಈ ಕಾರ್ಯಕ್ರಮ ವನ್ನು ಕುರಿತು ವಿದ್ಯಾರ್ಥಿನಿ ಕುಮಾರಿ ಅಪೇಕ್ಷಾ ಹಿರೇಮಠ SFI ಸಂಘಟನೆ ನಮ್ಮಗಾಗಿ ಇರುವ ಸಂಘಟನೆ ಅದನ್ನು ಬೆಳಿಸೋಣ‌‌ ಸಮಾಜದ ಬದಲಾವಣೆ ಗಾಗಿ ಮತ್ತು ವಿದ್ಯಾರ್ಥಿ ಗಳಿಗಾಗಿ ಹೋರಾಟ ಮಾಡುತ್ತಿದೆ ನಾವು ಜೊತೆಯೋಣ ಎಂದು ತಮ್ಮ ಅನಿಸಿಕೆಗಳನ್ನು ಹೇಳಿದರು.

ನಂತರ ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾಧ್ಯಕ್ಷ ರಮೇಶ ವೀರಾಪುರ SFI ಕಟ್ಟಿದರೆ ದೇಶ ಕಟ್ಟಿದಂತೆ ಈ ಸಂಘಟನೆ ಯನ್ನು ಬಲಿಷ್ಠ ವಾಗಿ ಕಟ್ಟಿ ಸಮಸ್ಯೆ ಗಳ‌ ವಿರುದ್ದ ಹಾಗೂ ಪ್ರಗತಿಗಾಗಿ ಸ್ಪಷ್ಟತೆಯೊಂದಿಗೆ ಸಂಘಟಿತ ಹೋರಾಟ ಮಾಡಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವಿತಾಳ ನಗರ ಘಟಕದ ಅಧ್ಯಕ್ಷ ಮೌನೇಶ ಬುಳ್ಳಾಪುರ ವಹಿಸಿದ್ದರು ಕಾರ್ಯಕ್ರಮ ವನ್ನು ಘಕಟ ಕಾರ್ಯದರ್ಶಿ ವೆಂಕಟೇಶ ವಟವಟ್ಟಿ ನಿರೂಪಿಸಿದರು.

ಈ ಕಾರ್ಯಕ್ರಮ ದಲ್ಲಿ SFI ಸಿರವಾರ ತಾಲ್ಲೂಕು ಕಾರ್ಯದರ್ಶಿ ಪ್ರವೀಣ್ ಕುಮಾರ್, ಮುಖಂಡರಾದ ಪ್ರತಾಪ ಸಿರವಾರ, ನಾಗಮೋಹನ್ ಸಿಂಗ್, ಕುಪ್ಪಣ್ಣ, ಮಲ್ಲಿಕಾರ್ಜುನ ಬಿ, ಗಣೇಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಕ್ರಾಂತಿಕಾರಿಗೀತೆಯನ್ನು ಮೈಬೂಬ್ ಗಣದಿನ್ನಿ, ಶರಣು ಹಾಗೂ ರಾಮಣ್ಣ ಭಜನೆ ಹಾಡಿದರು.

About Nagaraj M

Check Also

ತಾವರಗೇರಾ:- ರಸ್ತೆ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗರ್ಜಿನಾಳ ಕ್ರಾಸ್ ಹತ್ತಿರ ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ ಟಿ ಸಿ ಬಸ್ …

error: Content is protected !!