ಎನ್ ಶಾಮೀದ್ ತಾವರಗೇರಾ
ತಾವರಗೇರಾ ಹಾಗೂ ಮೆಣೇಧಾಳ ಮತ್ತು ಕಿಲ್ಲಾರಹಟ್ಟಿ ಕ್ಲಸ್ಟರ್ ವ್ಯಾಪ್ತಿಯ
ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ
ವಿದ್ಯಾಗಮ ಕಾರ್ಯಕ್ರಮ ಪುನಾ:ರಂಭ
ಮಾಡುವ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು. ಜನೇವರಿ 1 – 2021 ರಿಂದ ಸರ್ಕಾರ ಮತ್ತು ಇಲಾಖೆಯ
ಆಯುಕ್ತರು ವಿದ್ಯಾಗಮ ತರಗತಿ ಆರಂಭಕ್ಕೆ ಸುತ್ತೋಲೆ ಹೊರಡಿಸಿದ್ದಾರೆ ಎಂದು ಮೆಣೇಧಾಳ
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶರಣಪ್ಪ
ತುಮರಿಕೊಪ್ಪ ಹೇಳಿದರು
ಅವರು ಸಮೀಪದ ಮೆಣೇಧಾಳ ಗ್ರಾಮದಲ್ಲಿ
ಮಂಗಳವಾರ ನಡೆದ ಕ್ಲಸ್ಟರ್ ಮಟ್ಟದ ಹಿರಿಯ
ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಗಮ
ಕಾರ್ಯಕ್ರಮದ ಪೂರ್ವಸಿದ್ಧತಾ ಕುರಿತ
ಸಭೆಯಲ್ಲಿ ಮಾತನಾಡಿ, ಆರೋಗ್ಯ ಇಲಾಖೆಯ
ತಾಂತ್ರಿಕ ಸಮಿತಿ ಶಿಫಾರಸ್ಸು ಮಾಡಿರುವ
ನಿಯಮಾವಳಿಗಳನ್ನು ಕಡ್ಡಾಯವಾಗಿ
ಪಾಲಿಸಲಾಗುವದು , ಮಕ್ಕಳು ಮಾಸ್ಕ್
ಧರಿಸಬೇಕು, ಪೋಷಕರ ಅನುಮತಿ ಪತ್ರ
ಕಡ್ಡಾಯ, ಸ್ಥಳಿಯ ಸಮಿತಿಗಳಿಗೆ
ಕಾರ್ಯಕ್ರಮ ಕುರಿತಿ ಮಾಹಿತಿ ನೀಡಲಾಗುವದು,
ಶಾಲಾ ಆವರಣವನ್ನು ಸ್ಯಾನಿಟೈಜರ್ ಮಾಡುವದು,
ವಿದ್ಯಾಗಮ ಕೇಂದ್ರಗಳು ಸುರಕ್ಷಿತ
ಕೇಂದ್ರಗಳಾಗಿರಬೇಕು, ಶಿಕ್ಷಕರು ಸಹ
ಕೋವಿಡ್ ಪರೀಕ್ಷೆ ಕಡ್ಡಾಯ, ಗ್ರಾಪಂ ಮಕ್ಕಳ
ಸ್ನೇಹಿ ಗ್ರಾಮ ಪಂಚಾಯತಿ ಪ್ರತಿ ವಾರ ನಿಗದಿಪಡಿಸಿದ
ಚಟುವಟಿಕೆಗಳನ್ನು ಬೋಧನೆ ಮಾಡುವದು , ಮಕ್ಕಳ ಶಿಕ್ಷಣ ಮತ್ತು ಸನಿಯಮಾವಳಿಗಳನ್ನು ಪಾಲನೆ ಮಾಡಲಾಗುವದು
ಎಂದು ತಿಳಿಸಿದರು. ಅದೇ ರೀತಿ ಕಿಲಾರಹಟ್ಟಿ ಸಿಆರ್ ಸಿ ದೌವಲಸಾಬ ಮುಲ್ಲಾ ಮತ್ತು ತಾವರಗೇರಾ ಸಿಆರ್ ಸಿ ಕಾಶಿನಾಥ್ ನಾಗಲಿಕರ ಸಭೆ ನಡೆಸಿದರು.
ಸಭೆಯಲ್ಲಿ ಸಕಾ೯ರಿ ಶಾಲೆ ಹಾಗೂ ಅನುದಾನಿತ ಶಾಲೆಗಳ ಮುಖ್ಯ ಶಿಕ್ಷಕರಿಗೆ
ವಿದ್ಯಾಗಮ ಕಾರ್ಯಕ್ರಮ ಮತ್ತು ಸರ್ಕಾರದ
ನಿಯಮಾವಳಿಗಳ ಕುರಿತು ತಿಳಿಸಲಾಯಿತು.
ಕ್ಲಸ್ಟರ್ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆಗಳ
ಮುಖ್ಯ ಶಿಕ್ಷಕರು , ಸಿಬ್ಬಂದಿ ಇದ್ದರು.