Sunday , September 8 2024
Breaking News
Home / ಕ್ರೀಡೆ / ICC ODI Player of the Decade: ದಶಮಾನದ ಸರ್ವಶ್ರೇಷ್ಠ ODI ಕ್ರಿಕೆಟಿಗನಾಗಿ Virat Kohli ಆಯ್ಕೆ

ICC ODI Player of the Decade: ದಶಮಾನದ ಸರ್ವಶ್ರೇಷ್ಠ ODI ಕ್ರಿಕೆಟಿಗನಾಗಿ Virat Kohli ಆಯ್ಕೆ

 

ಎನ್ ಶಾಮೀದ್ ತಾವರಗೇರಾ

ನವದೆಹಲಿ: ICC ODI Player of the Decade: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ದಶಕದ ಅತ್ಯುತ್ತಮ ಏಕದಿನ ಕ್ರಿಕೆಟಿಗನನ್ನಾಗಿ ಆಯ್ಕೆ ಮಾಡಿದೆ. ಈ ದಶಕದಲ್ಲಿ, ಏಕದಿನ ಕ್ರಿಕೆಟ್‌ನಲ್ಲಿ 10,000 ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಕ್ರಿಕೆಟಿಗ ಕೊಹ್ಲಿ. ನಿನ್ನೆ ಅಂದರೆ ಭಾನುವಾರ, ಐಸಿಸಿ ಈ ದಶಕದ ಎಲ್ಲಾ ಮೂರು ಸ್ವರೂಪಗಳ ತಂಡಗಳಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನ ನೀಡಿತ್ತು. ಇದಲ್ಲದೆ, ಐಸಿಸಿ ಕೊಹ್ಲಿಯನ್ನು ಈ ದಶಕದ ಟೆಸ್ಟ್ ತಂಡದ ನಾಯಕರನ್ನಾಗಿ ಕೂಡ ಘೋಷಿಸಿದೆ.

ಈ ದಶಕದಲ್ಲಿ ವಿರಾಟ್ ಕೊಹ್ಲಿ ಅವರ ಸಾಧನೆ ಅದ್ಭುತವಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಅವರುಅತಿ ಹೆಚ್ಚು ರನ್, ಹೆಚ್ಚು ಶತಕಗಳನ್ನು ಮತ್ತು ಹೆಚ್ಚು ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ದಶಕದಲ್ಲಿ, ಕೊಹ್ಲಿ 39 ಶತಕಗಳು ಮತ್ತು 48 ಅರ್ಧಶತಕಗಳನ್ನು ಗಳಿಸಿದ್ದಾರೆ. ಇದಲ್ಲದೆ ಅವರು 122 ಕ್ಯಾಚ್‌ಗಳನ್ನು ಸಹ ಹಿಡಿದಿದ್ದಾರೆ.

About N Shameed

error: Content is protected !!