Sunday , September 8 2024
Breaking News
Home / Breaking News / ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಂತರ್ರಾಷ್ಟ್ರೀಯ ತೊಗಲುಗೊಂಬೆ ಕಲಾವಿದ ಕೇಶಪ್ಪ ಸಿಳ್ಳಿಕ್ಯಾತರ್ ಆಯ್ಕೆ

ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಂತರ್ರಾಷ್ಟ್ರೀಯ ತೊಗಲುಗೊಂಬೆ ಕಲಾವಿದ ಕೇಶಪ್ಪ ಸಿಳ್ಳಿಕ್ಯಾತರ್ ಆಯ್ಕೆ

 

ಎನ್ ಶಾಮೀದ ತಾವರಗೇರಾ

ಕೊಪ್ಪಳ,: ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯಿಂದ ಬರುವ 2021 ಜನವರಿ 10, 11 ಮತ್ತು12 ರಂದು 17 ನೇ ಬಾರಿಗೆ ನಡೆಯುವ ಇಟಗಿ ಉತ್ಸವದಲ್ಲಿ ಜ. 12 ರಂದು ನಡೆಯುವ 2 ನೇ ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ರನ್ನಾಗಿ ಕೇಶಪ್ಪ ಸಿಳ್ಳಿಕ್ಯಾತರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಭಾನುವಾರ ಕೊಪ್ಪಳದಲ್ಲಿ ನಡೆದ ಉತ್ಸವದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ಕೇಶಪ್ಪ ಸಿಳ್ಳಿಕ್ಯಾತರ್ ಅವರು ತೊಗಲುಗೊಂಬೆ ಕಲಾಪ್ರದರ್ಶನದಲ್ಲಿ ರಾಜ್ಯಮಟ್ಟದ ಅಂತರಾಷ್ಟ್ರೀಯ ಮಟ್ಟದ ಉತ್ಸವಗಳಲ್ಲಿ ಪ್ರದರ್ಶನದ ಮೂಲಕ ಹೆಸರುವಾಸಿಯಾಗಿದ್ದರು
ಅಂತರಾಷ್ಟ್ರೀಯ ಪೂಫೆಟ್ ಫೆಸ್ಟಿವಲ್ ನಲ್ಲಿಯೂ ಸಹ ಭಾಗವಹಿಸಿ ಖ್ಯಾತಿ ಗಳಿಸಿದವರು. ಇಟಲಿ .ಫ್ರಾನ್ಸ್ .
ನೆದರ್ಲೆಂಡ್ ಹಾಗೂ ಇರಾನ್ ದೇಶಗಳಲ್ಲಿ ತಮ್ಮ ತೊಗಲುಗೊಂಬೆ ಪ್ರದರ್ಶನವನ್ನು ವಿವಿಧ ವೇದಿಕೆಗಳಲ್ಲಿ ನೀಡಿದವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನೇಕ ಕಾರ್ಯಕ್ರಮಗಳಲ್ಲಿ ಹಂಪಿ ಉತ್ಸವ, ಮೈಸೂರು ದಸರಾ, ಇಟಗಿ ಉತ್ಸವ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೊರನಾಡು ಉತ್ಸವ,
ಲಕ್ಕುಂಡಿ ಉತ್ಸವ,
ಕೊಪ್ಪಳ ಜಿಲ್ಲಾ ಉತ್ಸವ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ತೊಗಲು ಗೊಂಬೆಯ ಪ್ರದರ್ಶನವನ್ನು
ಗ್ರಾಮೀಣ ಸೊಗಡಿನ ಈ ತೊಗಲುಗೊಂಬೆಯ ಉಳಿವಿಗಾಗಿ ಗ್ರಾಮೀಣ ಮಟ್ಟದಲ್ಲಿ ಇದ್ದುಕೊಂಡು ಈ ಕಲೆಯನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ ಹಾಗೂ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಜನಪದ ಕಲೆಯಾದ ತೊಗಲುಗೊಂಬೆಯ ಅವರ ಸೇವೆಯನ್ನು ಪರಿಗಣಿಸಿ
ಇಟಗಿ ಉತ್ಸವದಲ್ಲಿ ನಡೆಯುವ ಎರಡನೇ ಜಾನಪದ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲಾಯಿತು. ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಹೇಶ್ ಬಾಬು ಸುರ್ವೆ ಅವರ ಅಧ್ಯಕ್ಷತೆಯಲ್ಲಿ ಈ ಆಯ್ಕೆಯನ್ನು ಮಾಡಲಾಯಿತು. ಸಭೆಯಲ್ಲಿ ಸಿದ್ದಪ್ಪ ಹಂಚಿನಾಳ, ಜಿಎಸ್ ಗೋನಾಳ, ಎಂ.ಸಾದಿಕ್ ಅಲಿ, ಶಿವಕುಮಾರ್ ಹಿರೇಮಠ, ಮಂಜುನಾಥ್ ಅಂಗಡಿ, ಉಮೇಶ್ ಪೂಜಾರ, ಸುಶೀಲಾ ಎಂ. ಎಸ್, ಮಲ್ಲಯ್ಯ ಕೂಮಾರಿ ಸೇರಿದಂತೆ
ಇತರರು ಭಾಗವಹಿಸಿದ್ದರು.
ಎಂದು  ಉತ್ಸವದ ಸಂಚಾಲಕ ಮಹೇಶ್ ಬಾಬು ಸುರ್ವೆ ಅವರು ತಿಳಿಸಿದ್ದಾರೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!