ಕೊಪ್ಪಳ ಜಿಲ್ಲೆಯ 3095 ಅಭ್ಯರ್ಥಿಗಳ ಭವಿಷ್ಯ ಬರೆದ ಮತದಾರ

N Shameed
1 Min Read

 

ಎನ್ ಶಾಮೀದ್ ತಾವರಗೇರಾ                                                                                                                  ಕೊಪ್ಪಳ : ಜಿಲ್ಲೆಯಲ್ಲಿ ಗ್ರಾಪಂ 2 ನೇ ಹಂತದ ಚುನಾವಣೆಯಲ್ಲಿ ಒಟ್ಟು 3095 ಅಭ್ಯರ್ಥಿಗಳ ಭವಿಷ್ಯ ಬರೆಯಲಿರುವ ಮತದಾನವು ಬಹುತೇಕ ಶಾಂತಿಯುತವಾಗಿ ನಡೆಯಿತು.

ಗ್ರಾಮ ಪಂಚಾಯಿತಿಯ ಎರಡನೇ ಹಂತದ ಚುನಾವಣೆ ಪ್ರಯುಕ್ತ ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ಶಾಂತಿಯುತ ಮತದಾನ ನಡೆಯಿತು.
ಹೋಬಳಿ ವ್ಯಾಪ್ತಿಯಲ್ಲಿ ಬರುವ ಕಿಲ್ಲಾರಹಟ್ಟಿ, ಸಂಗನಾಳ, ಜುಮಲಾಪೂರ, ಮೆಣೇಧಾಳ, ಲಿಂಗದಹಳ್ಳಿ ಗ್ರಾಮ ಪಂಚಾಯತಿ ಗಳ ಗ್ರಾಮಗಳಲ್ಲಿ ಬಿರುಸಿನ ಮತದಾನ ನಡೆಯಿತು.

ಗ್ರಾಮ ಪಂಚಾಯಿತಿಯ ಪ್ರತಿಯೊಂದು ಮತಗಟ್ಟೆಯಲ್ಲಿ ಸಾಲಾಗಿ ನಿಂತಿರುವದು ಕಂಡು ಬಂದಿತು. ಮತಕೇಂದ್ರದ ಹೊರಗೆ ಕೋವಿಡ್-19 ಹಿನ್ನಲೆಯಲ್ಲಿ ಆಶಾ ಕಾರ್ಯಕರ್ತೆಯರು ಸ್ಯಾನಿಟೈಜರ್ ಮತ್ತು ತಪಾಸಣೆ ಕಾರ್ಯ ನಡೆಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಲು ವ್ಯವಸ್ಥೆ ಮಾಡಿದ್ದು, ಸರ್ಕಾರದ ಕೋವಿಡ್ -19 ನಿಮಯಾನುಸಾರ ಮತಗಟ್ಟೆ ಕೇಂದ್ರದಲ್ಲಿ ಎಲ್ಲಾ ಮೂಲ ಸೌಕರ್ಯಗಳನ್ನು ಸಹ ಮಾಡಲಾಗಿದೆ.
ಬೆಳಿಗ್ಗೆ ವಾರ್ಡಗಳಲ್ಲಿಯ ಮತದಾರರು ಮತಕೇಂದ್ರಕ್ಕೆ ಬಂದು ಮತ ಚಲಾಯಿಸಿ, ನಂತರ ತಮ್ಮ ದಿನ ನಿತ್ಯದ ಕೆಲಸಗಳಿಗೆ ಹೋಗುತ್ತಿರುವದು ಕಂಡು ಬಂದಿತು.
ನವಲಹಳ್ಳಿ ಗ್ರಾಮದಲ್ಲಿ ಮತದಾನ ಕೇಂದ್ರದ ಹೊರಭಾಗದಲ್ಲಿ ಸಾಲಾಗಿ ನಿಲ್ಲುವಂತೆ ಪೆಂಡಾಲ್ ಹಾಕಿದ್ದು, ಪೊಲೀಸ್ ಸೂಕ್ತ ಬಂದೋ ಬಸ್ತ ಮಾಡಲಾಗಿತ್ತು. ಹೋಬಳಿ ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿ ಬಿರುಸಿನ ಮತದಾನ ನಡೆದಿರುವ ಬಗ್ಗೆ ವರದಿ ಬಂದಿವೆ.
ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Share this Article
error: Content is protected !!