ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:- ರಂಜಾನ್ ಹಬ್ಬವು ಸೋಮವಾರದಂದು ಆಚರಿಸಲು ನಿಗದಿಯಾದಲ್ಲಿ ಅದೇ ದಿನದಂದು ಯುಗಾದಿ ಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ಬಣ್ಣವು ನಡೆಯುವುದರಿಂದ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಪಟ್ಟಣದಲ್ಲಿ, ಮುಸಲ್ಮಾನ್ ಬಂಧುಗಳು ಸೋಮವಾರದಂದು ಬೆಳಗ್ಗೆ 9:30 ರ ಒಳಗಾಗಿ ಪ್ರಾರ್ಥನೆ ಮುಗಿಸುವುದರಿಂದ ನಂತರ ಬಣ್ಣದಾಟ ನಡೆಯುವುದರಿಂದ ಯಾವುದೇ ತೊಂದರೆ ಆಗುವದಿಲ್ಲ ಎಂದು ಸ್ಥಳೀಯ ಠಾಣೆಯ ಪಿಎಸ್ಐ ನಾಗರಾಜ್ ಕೋಟಗಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಪಟ್ಟಣದಲ್ಲಿ ಇದುವರೆಗೂ ಹಿಂದೂ ಮುಸಲ್ಮಾನ ಬಂಧುಗಳು ಸಹೋದರರಂತೆ ಇದ್ದು, ಈ ಬಾರಿ ಕೂಡ ಎರಡು ಹಬ್ಬವನ್ನು ಸಂಭ್ರಮ ಹಾಗೂ ಶಾಂತಿಯಿಂದ ಆಚರಿಸಬೇಕು, ಒಂದು ವೇಳೆ ರಂಜಾನ್ ಹಬ್ಬವು ಮಂಗಳವಾರ ಬಂದಲ್ಲಿ ಯಾವುದೇ ತೊಂದರೆ ಇಲ್ಲದೆ ಮುಸಲ್ಮಾನ್ ಬಂಧುಗಳು ಪ್ರತಿವರ್ಷದಂತೆ ತಮ್ಮ ನಿಗದಿತ ಸಮಯದೊಳಗೆ ಹಬ್ಬವನ್ನು ಆಚರಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.