ತಾವರಗೇರಾ:- ಮನೆ ಕಳ್ಳನ ಬಂಧನ..!

N Shameed
1 Min Read
ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:-  ಪಟ್ಟಣದ ವಿಶ್ವೇಶ್ವರಯ್ಯ ನಗರದಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.
 ಆರೋಪಿಯನ್ನು ಗದಗ್ ಪಟ್ಟಣದ ಎಸ್ಎಂ ಕೃಷ್ಣ ನಗರದ ತಾಹಿರ್ ಅಲಿ ಇರಾನಿ ಎಂದು ಗುರುತಿಸಲಾಗಿದ್ದು ಇವನು ಆಟೋ ಡ್ರೈವರ್ ಆಗಿದ್ದಾನೆ ಮನೆ  ಕಳ್ಳತನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಆರ್ ಅರಸಿದ್ದಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್ ಹೇಮಂತ್ ಕುಮಾರ್ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಸಿಪಿಐ ಯಶವಂತ ಬಿಸನಹಳ್ಳಿ ಇವರ ಮಾರ್ಗದರ್ಶನದಲ್ಲಿ ಸ್ಥಳೀಯ ಪಿಎಸ್ಐ ನಾಗರಾಜ್ ಕೋಟಿಗಿ ಹಾಗೂ ಸಿಬ್ಬಂದಿಗಳಾದ ಈರಪ್ಪ ಏಎಸ್ಐ ಬಸವರಾಜ್ ಮೊಮ್ಮದ್ ರಫಿ ಶರಣಪ್ಪ ಯಮನಪ್ಪ ಹನುಮಂತ ಹನುಮಗೌಡ ತಿಪ್ಪಣ್ಣ ಹಾಗೂ ಪ್ರಸಾದ್ ಮಂಜುನಾಥ್ ಆರೋಪಿಯನ್ನು ಪತ್ತೆ ಹಚ್ಚಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ ಬಂದಿತನಿಂದ ಒಟ್ಟು 47 ಗ್ರಾಂ ತೂಕದ ಬಂಗಾರದ ಒಡೆವೆಗಳು ಮೂರು ಲಕ್ಷ 80000 ಹಾಗೂ 260 ಗ್ರಾಂನ ಬೆಳ್ಳಿ ಒಡೆಯುಗಳು ಒಟ್ಟು ನಾಲ್ಕು ಲಕ್ಷದ 3400 ಬೆಲೆ ಬಾಳು ಬಂಗಾರ ಹಾಗು ವಶಪಡಿಸಿಕೊಂಡಿದ್ದಾರೆ. 
ಸ್ಥಳೀಯ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ರಾಮ್ ಎಲ್ ಅರಸಿದ್ದಿ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.
Share this Article
error: Content is protected !!