ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:- ಸೇವಾಲಾಲ್ ಜಯಂತಿಯ ದಿನದಂದು ವಿದ್ಯಾರ್ಥಿಯೊಬ್ಬ ಚಾಕಲೇಟ್ ಕೊಡಿ ಎಂದು ಕೇಳಿದ್ದಕ್ಕಾಗಿ ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ಕಾಲಿನಿಂದ ಒದ್ದು ವಿದ್ಯಾರ್ಥಿಯನ್ನು ಥಳಿಸಿದ ಘಟನೆಯೊಂದು ಸಮೀಪದ ಜುಲುಕುಂಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಸಂತ ಸೇವಾ ಲಾಲ್ ಜಯಂತಿ ದಿನದಂದು ಪೂಜೆ ಮುಗಿದ ನಂತರ ವಿದ್ಯಾರ್ಥಿಗಳಿಗಾಗಿ ಶಿಕ್ಷಕರು ಚಾಕಲೇಟ್ ನೀಡುವಾಗ ಈ ಘಟನೆ ನಡೆದದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ,
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶ್ರೀಕಾಂತ್ ಎಂಬ ಶಿಕ್ಷಕ ಚಾಕಲೇಟ್ ಕೇಳಿದ ವಿದ್ಯಾರ್ಥಿಯನ್ನು ಬಿಟ್ಟು ಬೇರೊಬ್ಬ ವಿದ್ಯಾರ್ಥಿಯನ್ನು ಕಾಲಿನಿಂದ ಒದ್ದು ನಂತರ ಕೆಳಗೆ ಬಿದ್ದಾಗಲೂ ಕೂಡ ಬಿಡದೆ ವಿದ್ಯಾರ್ಥಿಯನ್ನು ಥಳಿಸಿದ್ದಾನೆ, ಈ ಘಟನೆ ತಿಳಿಯುತ್ತಿದ್ದಂತೆ ಪಾಲಕರು ಶಾಲೆಗೆ ಬಂದ ನಂತರ ಶಿಕ್ಷಕನನ್ನು ತರಾಟೆ ಗೆ ತೆಗಿದುಕೊಂಡಿದ್ದು ನಂತರ ಶಾಲಾ ಮುಖ್ಯ ಗುರು ಹಾಗೂ ಸ್ಥಳೀಯರು ಸೇರಿಕೊಂಡು ಪಾಲಕರನ್ನು ಸಮಾಧಾನಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಶಿಕ್ಷಕನ ವರ್ತನೆ ಬಗ್ಗೆ ತಕ್ಷಣವೇ ಮೇಲಾಧಿಕಾರಿಗಳು ಕ್ರಮ ಕೈಗೊಂಡು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.