ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಗುರುವಾರ ಬೆಳಿಗ್ಗೆ ಸಮೀಪದ ನಂದಾಪುರ ಕ್ರಾಸ್ ಹತ್ತಿರ ಲಾರಿ ಹಾಗೂ ಬುಲೆರೊ ವಾಹನ ಡಿಕ್ಕಿ ಸಂಭವಿಸಿ ಬುಲೆರೋ ವಾಹನಕ್ಕೆ ಬೆಂಕಿ ಹತ್ತಿದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟ ಘಟನೆ ಜರುಗಿದೆ.
ತಾವರಗೇರಾದಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಲಾರಿಯೊಂದು ಕುಷ್ಟಗಿಯಿಂದ ಬರುತ್ತಿದ್ದ ಬುಲೆರೋ ಗಾಡಿ ಗೆ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲಿಯೇ ಬೆಂಕಿ ತಗುಲಿ ಬೊಲೆರೋ ವಾಹನದಲ್ಲಿದ್ದ ಸಿದ್ದಪ್ಪ ಚತ್ರಪ್ಪ ಪೊಲೀಸ್ ಪಾಟೀಲ್ (25) ಹಾಗೂ ಅಂಜಪ್ಪ ಸೋಮಪ್ಪ ಪೊಲೀಸ್ ಪಾಟೀಲ್ (30) ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಕೊಪ್ಪಳ ಜಿಲ್ಲಾ ವರಿಷ್ಠಾಧಿಕಾರಿ ಎಲ್ ಆರ್ ಅರಸಿದ್ದಿ, ಗಂಗಾವತಿ ಡಿವೈಎಸ್ಪಿ, ಕುಷ್ಟಗಿ ಸಿಪಿಐ, ಸ್ಥಳೀಯ ಪಿಎಸ್ಐ ನಾಗರಾಜ್ ಕೋಟಗಿ, ಏಎಸ್ಐ ಶಿವಪುತ್ರಪ್ಪ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.