ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:- ಪಟ್ಟಣದ ಶೇಖರಪ್ಪ ಮುತ್ತೆನವರ್ ವಿಶ್ವವಾಣಿ ದಿನ ಪತ್ರಿಕೆ ಯು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪ್ರತೀವರ್ಷ ನೀಡುವ ‘ಗ್ಲೋಬಲ್ ಅಚೀವಸ್೯ ಅವಾರ್ಡ, ಲಭಿಸಿದೆ.
ಪಟ್ಟಣದ ರೈತ ಕುಟುಂಬದಲ್ಲಿ ಹುಟ್ಟಿ ಪಟ್ಟಣದ ಸಹಕಾರಿ ಬ್ಯಾಂಕಿನಲ್ಲಿ ಪಿಗ್ಮಿ ಏಜೆಂಟ್ ಆಗಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ ಶೇಖರಪ್ಪ ಮುತ್ತೆನವರ್ ಸದ್ಯ ಕೊಪ್ಪಳದಲ್ಲಿ ಯಶಸ್ವಿ ಉದ್ಯಮಿ ಯಾಗಿ ಹೋರಹೊಮ್ಮಿದ್ದಾರೆ, ಇವರಿಗೆ ಓಮನ್ ದೇಶದ ರಾಜಧಾನಿ ಮಸ್ಕತ್ ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ , ಇವರ ಸಾಧನೆಗೆ ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಊರಿನ ಹಿರಿಯರು ಅಭಿನಂದಿಸಿದ್ದಾರೆ.