ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ :- ಸಮೀಪದ ಜುಮಲಾಪೂರ ಗ್ರಾಮದ ನಿವಾಸಿ ತಾವರಗೆರಾ ಪಟ್ಟಣದ ವಿಠಲಾಪೂರ ರಸ್ತೆಯಲ್ಲಿ ವಾಸವಿದ್ದ ಶಿವಾನಂದಯ್ಯ ಎಂಬ ವ್ಯಕ್ತಿಯು ತನ್ನ ಪತ್ನಿಯನ್ನು ಕೊಲೆಮಾಡಿರುವ ಘಟನೆ ಮಂಗಳವಾರ ನಡೆದಿದೆ.
ಕೊಲೆಯಾದ ದುರ್ದೈವಿ ಶರಣಮ್ಮ ಹಿರೇಮಠ (೪೨)ಎಂದು ಗುರುತಿಸಲಾಗಿದೆ.
ಶಿವಾನಂದಯ್ಯ ನ ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಹಲವು ಬಾರಿ ಕಲಹ ನಡೆದು, ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯೆಗೊಂಡಿದೆ.
ಮೃತಳ ಸಹೋದರ ಗಣೇಶಯ್ಯ ಗಡ್ಡಿಮಠ ದೂರು ನೀಡಿದ ಹಿನ್ನಲೆಯಲ್ಲಿ ಶಿವಾನಂದಯ್ಯ ಹಾಗೂ ಮಕ್ಕಳಾದ ರವಿಕುಮಾರ, ಸುಧಾ, ಶಿವಚಂದ್ರಯ್ಯ ಈ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್ ಆರ್ ಅರಸಿದ್ದಿ ಮತ್ತು ಗಂಗಾವತಿ ಡಿ ವೈಎಸ್ ಪಿ ಸಿದ್ದಲಿಂಗಪ್ಪ ಗೌಡ, ಕುಷ್ಟಗಿ ಸಿ ಪಿ ಐ ಯಶವಂತ ಬಿಸನಹಳ್ಳಿ, ಸ್ಥಳೀಯ ಠಾಣಾಧಿಕಾರಿ ನಾಗರಾಜ ಕೋಟಗಿ ಹಾಗೂ ಕೊಪ್ಪಳ ಪರಿವೀಕ್ಷಣಾ ತಂಡದವರು ಆಗಮಿಸಿ ಪರಿಶಿಲನೆ ನಡೆಸಿದರು.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.