
ನಾಗರಾಜ ಎಸ್ ಮಡಿವಾಳರ
ಮುದಗಲ್ : ಪುರಸಭೆ ಅಧ್ಯಕ್ಷರಾಗಿ ಮಹಾದೇವಮ್ಮ ಗುತ್ತೇದಾರ ಉಪಾಧ್ಯಕ್ಷರಾಗಿ ಅಜ್ಮಿರ್ ಬೆಳ್ಳಿಕಟ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿ ಶಾಂಶಲಾಂ ಹೇಳಿದರು.
ಸರಕಾರ ಕೆಲ ದಿನಗಳ ಹಿಂದೆ ಹೊರಡಿಸಿದ್ದ ಆದೇಶದಂತೆ
ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲಿರುವ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯರಲ್ಲಿ ತೀವ್ರ ಪೈಪೋಟಿ ಸೃಷ್ಟಿ ಮಾಡಿತ್ತು ಕಾಂಗ್ರೆಸ್ ಮಹಿಳಾ ಸದಸ್ಯರಾದ 15 ನೇ ವಾರ್ಡ್ ಸದಸ್ಯೆ ಮಹಾದೇವಮ್ಮ ಗುತ್ತೇದಾರ ರನ್ನ ಅಧ್ಯಕ್ಷೆಯಾಗಿ 14ನೇ ವಾರ್ಡ್ ಸದಸ್ಯ ಅಜ್ಮಿರ್ ಬೆಳ್ಳಿಕಟ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಪುರಸಭೆ ಗದ್ದುಗೆಗೆ ಏರಿಸಲು ಪುರಸಭೆ ಬಹು ಮತ ಹೊಂದಿದ ಕಾಂಗ್ರೆಸ್ ಸದಸ್ಯರು ಆಯ್ಕೆ ಮಾಡಿದರು.ಈ ಸಂದರ್ಭದಲ್ಲಿ ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರಗೌಡ, ಲಿಂಗಸಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ್, ಪುರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರು ಇದ್ದರು.