ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಮೂಡ ಒಂದು ಹಗರಣವೇ ಅಲ್ಲ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಮಂಗಳವಾರ ಸಮೀಪದ ಸಜ್ಜಲಗುಡ್ಡದ ಶರಣಮ್ಮ ತಾಯಿ ಶ್ರೀ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು
ರಾಜ್ಯಪಾಲರು ಬಿಜೆಪಿಯವರ ಕೈಗೊಂಬೆಯಾಗಿದ್ದಾರೆ ಸುಭದ್ರ ಕಾಂಗ್ರೆಸ್ ಸರಕಾರ ಜನರ ಹೇಳಿಗೆಗಾಗಿ ನಡೆಯುತ್ತಿರುವುದು ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿರುವುದರಿಂದ ಈ ಮೂಡ ಹಗರಣ ಎಂದು ಸುಳ್ಳು ಸಭೆಗಳ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಮಾಡುತ್ತಿದ್ದಾರೆ ಸಿ ಎಂ ಸಿದ್ದರಾಮಯ್ಯರವರ ಮೇಲೆ ಆರೋಪ ಮಾಡುವ ಬಿಜೆಪಿಗರು ಒಂದಾದರು ಅಧಿಕಾರ ದುರುಪಯೋಗ ಮಾಡಿದ್ದ ಸಾಕ್ಷಿ ನೀಡಿಲಿ ಸಿದ್ದರಾಮಯ್ಯನವರ ಧರ್ಮಪತ್ನಿಯ ಸಹೋದರ 2004 ರಲ್ಲಿ ಆ ನಿವೇಶನವನ್ನ ಖರೀದಿ ಮಾಡಿ 2005 ರಲ್ಲಿ ಏನ್ ಎ ಆಗಿದ್ದು ಈ 50/50 ಅನುಪಾತ ಮಾಡಿದ್ದು ಬಿಜೆಪಿ ಸರಕಾರ ಇದ್ದಾಗಲೇ ಇದಕ್ಕೆ ಅನುಮತಿ ನೀಡಲಾಗಿದೆ ಬಿಜೆಪಿಯವರೇ ಮೂಡ ಅಧ್ಯಕ್ಷರಿದ್ದರು
ಅದರಲ್ಲಿ ಬರಿ 14 ನಿವೇಶನಗಳು ಮಾತ್ರ ನೀಡಿಲ್ಲ 1090ನಿವೇಶನಗಳು 50/50ಅನುಪಾತದಲ್ಲಿ ನೀಡಿದ್ದಾರೆ ಬಿಜೆಪಿಯವರು ದೂರು ನೀಡಿದ 4 ಗಂಟೆಯಲ್ಲೇ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ನಮಗೆ ಅನುಮಾನ ಕಾಡುತ್ತಿದೆ ದೂರುದಾರ ಟಿ.ಜೆ.ಅಬ್ರಹಾಂ ಲೋಕಾಯುಕ್ತರಿಗೆ ದೂರು ನೀಡಿದ್ದು ತನಿಖೆಯಾಗಲಿ ತನಿಖೆ ಎದುರಿಸಲು ಅವರು ಸಿದ್ದರಿದ್ದಾರೆ ತನಿಖೆಗೆ ಅಡ್ಡಿಯಾಗಿ ಸರಕಾರ ಯಾವುದೇ ಪತ್ರ ಬರೆದಿಲ್ಲ ಬಿಜೆಪಿ ಆಡಳಿತಾವದಿಯಲ್ಲಿ ನಡೆದ ಹಗರಣವನ್ನ ಬಿಜೆಪಿ ಶಾಸಕ ಬಸನಗೌಡ ಯತ್ನಾಳ ಬಿಡಿ ಬಿಡಿಯಾಗಿ ವಿವರಿಸಿದರು ಕೂಡ ವಿಜಯೇಂದ್ರ ಮತ್ತು ಯಡಿಯೂರಪ್ಪ ನವರ ಮೇಲೆ ಯಾವುದೇ ತನಿಖೆಯಾಗುತ್ತಿಲ್ಲ ಬಿಜೆಪಿಗರು ಒಬ್ಬ ಹಿಂದುಳಿದ ನಾಯಕನ ವಿರುದ್ಜ ಷಡ್ಯಂತ್ರ ರೂಪಿಸಿ ಸುಳ್ಳು ಆರೋಪಗಳನ್ನ ಮಾಡಿ ಮೈಸೂರಿನಲ್ಲಿ ಬೃಹತ್ ಸಭೆ ನಡೆಸಿದರು ಆದರೆ ಸಭೆಗೆ ಜನರೇ ಸೇರಲಿಲ್ಲ ರಾಜ್ಯದ ಜನರಿಗೆ ಸಿದ್ದರಾಮಯ್ಯ ಯಾರೆಂದು ತಿಳಿದಿದೆ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದರು. ಈ ಸಂದರ್ಭದಲ್ಲಿ ರಾಯಚೂರು–ಕೊಪ್ಪಳ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಸೇರಿದಂತೆ ಇನ್ನಿತರರು ಇದ್ದರು.