ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಪಟ್ಟಣದ ಹಿರಿಯರು ಹಾಗೂ ಮುತ್ಸದಿ ಗಳಾದ ಸಂಗಪ್ಪಗೌಡ್ರ ಪಾಟೀಲ (89) ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದು , ಪಟ್ಟಣದ ನಾಗರಿಕರು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ .
ಮೃತರು ಮೂವರು ಪುತ್ರಿಯರು ಹಾಗೂ ಮೂವರು ಪುತ್ರ ರನ್ನು ಅಗಲಿದ್ದು, ಅದರಲ್ಲಿ ಹಿರಿಯ ಪುತ್ರರಾದ ಬಿ ಎಸ್ ಪಾಟೀಲ, ಬೆಂಗಳೂರು ನಗರದ ಹಿರಿಯ ಕಾನೂನು ಅಧಿಕಾರಿಗಳು ಹಾಗೂ ವಿಶೇಷ ನ್ಯಾಯಾಲಯದ ಸರ್ಕಾರದ ಅಭಿಯೋಜಕರು ಅವರ ತಂದೆಯವರಾಗಿದ್ದಾರೆ.
Video Player
00:00
00:00
ಮೃತರ ಅಂತ್ಯಕ್ರಿಯೆಯು ಮಂಗಳವಾರ ಸಂಜೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ, ಸಂಸದರಾದ ಬಸವರಾಜ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ದೊಡ್ಡನಗೌಡ ಪಾಟೀಲ, ಮಾಜಿ ಸಚಿವರಾದ ಅಮರೇಗೌಡ ಪಾಟೀಲ ಬಯ್ಯಾಪುರ ಸೇರಿದಂತೆ ಸ್ಥಳೀಯ ಮುಖಂಡರಾದ ಅಯ್ಯನಗೌಡ ಪಾಟೀಲ್, ಶೇಖರಗೌಡ ಪಾಟೀಲ್, ವೀರಭದ್ರಪ್ಪ ನಾಲತವಾಡ ಹಾಗು ಇನ್ನಿತರ ಮುಖಂಡರು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.