Sunday , September 8 2024
Breaking News
Home / Breaking News / ಮೌಢ್ಯಗಳನ್ನು ದಿಕ್ಕರಿಸಿ,ಶರಣರ ಆಶಯ ಪಾಲನೆಗೆ ಬದ್ದರಾಗೋಣ – ತಹಶಿಲ್ದಾರ ಶಂಶಾಲಂ

ಮೌಢ್ಯಗಳನ್ನು ದಿಕ್ಕರಿಸಿ,ಶರಣರ ಆಶಯ ಪಾಲನೆಗೆ ಬದ್ದರಾಗೋಣ – ತಹಶಿಲ್ದಾರ ಶಂಶಾಲಂ

ಮೌಢ್ಯಗಳನ್ನು ದಿಕ್ಕರಿಸಿ,ಶರಣರ ಆಶಯ ಪಾಲನೆಗೆ ಬದ್ದರಾಗೋಣ – ತಹಶಿಲ್ದಾರ ಶಂಶಾಲಂ

ಲಿಂಗಸಗೂರು ಜು 22:- ಬಸವಾದಿ ಶರಣರ ಆಶಯದಂತೆ ಸಮಾಜದಲ್ಲಿರುವ ಮೌಢ್ಯಗಳ ಆಚರಣೆ ಬಿಟ್ಟು ಸಮಾನತೆ,ವೈಚಾರಿಕತೆಯ ಸಮಾನತೆಯ ಸಮಾಜ ನಿರ್ಮಾಣ ಕ್ಕೆ ಬದ್ದರಾಗೋಣ ಎಂದು ತಹಶಿಲ್ದಾರ ಶಂಶಾಲಂ ಹೇಳಿದರು.

ಪಟ್ಟಣದ ತಹಶಿಲ್ದಾರ ಆಡಳಿತ ಕಛೇರಿಯಲ್ಲಿ ಹಡಪದ ಅಪ್ಪಣ್ಣನವರ 889 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

12 ನೇ ಶತಮಾನದಲ್ಲಿ ಬಸವಣ್ಣನವರು ಸಮಾಜದಲ್ಲಿರುವ ಮೌಢ್ಯ ,ಕಂದಾಚಾರ ,ಅಸ್ಪ್ರೃಶ್ಯತೆ ಹೋಗಲಾಡಿಸಲು ತಳ ಸಮುದಾಯದ ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಂಡು ಬಸವಣ್ಣ ನವರನ್ನು ಭೇಟಿಯಾಗುವ ಮುಂಚೆ ಹಡಪದ ಅಪ್ಪಣ್ಣನವರನ್ನು ಭೇಟಿ ಮಾಡುವ ಪರಿಪಾಠವನ್ನು ಹಾಕಿದ್ದರು ಎಂದರು.

ಈ ಸಂಧರ್ಭದಲ್ಲಿ ಉಪ ತಹಶಿಲ್ದಾರ ಬಸವರಾಜ ಝಳಕಿಮಠ,ಹಡಪದ ಸಮಾಜದ ತಾಲುಕಾ ಅಧ್ಯಕ್ಷ ಜಗನ್ನಾಥ ಚಿತ್ತಾಪುರ,ಮುತ್ತಣ್ಣ ಗುಡಿಹಾಳ,ಶರಣಬಸವ ಈಚನಾಳ,ಆದಪ್ಪ ಸರ್ಜಾಪುರ,ಬಸವರಾಜ ಯಲಗಟ್ಟಾ,ಮಂಜುನಾಥ ಬಳ್ಳಾರಿ,ಆದಪ್ಪ ಮೇದನಾಪುರ,ಅಮರೇಶ ಗುಡದನಾಳ,ಚುಡಾಮಣಿ,ವಿರೇಶ,ಸಂತೋಷ,ವಿಶ್ವ,ಮಲ್ಲಿಕಾರ್ಜುನ,ಸೇರಿದಂತೆ ಇತರರಿದ್ದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!