ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ :- ಇಂದಿನ ಮಕ್ಕಳೇ ಮುಂದೆ ರಾಷ್ಟ್ರದ ನಾಯಕರು ಎನ್ನುವ ನಿಟ್ಟಿನಲ್ಲಿ ಮಕ್ಕಳಲ್ಲಿ ಬೌದ್ಧಿಕ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಶಾಲಾ ಸಂಸತ್ತು ರಚಿಸಿ ಅವರಿಗೆ ವಿವಿಧ ಖಾತೆಗಳನ್ನು ನೀಡುವ ಮೂಲಕ ಶಾಲಾ ಅಭಿವೃದ್ಧಿಗಾಗಿ ಹಾಗೂ ಶೈಕ್ಷಣಿಕ ಮತ್ತು ರಾಜಕೀಯ ಅನುಭವದ ಉದ್ದೇಶದಿಂದ ಸ್ಥಳೀಯ ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ಸಂಸತ್ ಚುನಾವಣೆ ನಡೆಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಸ್ಥಳೀಯ ಮೌಲಾನ ಆಜಾದ್ ಮಾದರಿ ವಸತಿ ಶಾಲೆಯ ಪ್ರಾಚಾರ್ಯರಾದ ಶರಣಬಸವ ಹಾಗೂ ಸಿಬ್ಬಂದಿ ವರ್ಗದವರು ಸೇರಿ ರಾಷ್ಟ್ರ, ರಾಜ್ಯ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ಮಾದರಿಯಲ್ಲಿಯೇ ವಿದ್ಯಾರ್ಥಿಗಳಿಗೆ ನಾಮಪತ್ರ ಸಲ್ಲಿಸಿ ನಂತರ ವಿದ್ಯಾರ್ಥಿಗಳು ಮತ ಚಲಾಯಿಸುವುದು ಸೇರಿದಂತೆ ಪ್ರಸಕ್ತ ಚುನಾವಣೆಯಂತಹ ಪ್ರಕ್ರಿಯೆ ನಡೆಸಿ ಜೊತೆಗೆ ಶಾಲಾ ಮಕ್ಕಳಿಂದಲೇ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಮತ್ತು ಚುನಾವಣೆ ಏಜೆಂಟರನ್ನು ಅದೇ ವಿದ್ಯಾರ್ಥಿಗಳು ನಡೆಸಿಕೊಟ್ಟಿರುವುದು ವಿಶೇಷವಾಗಿತ್ತು.
ಒಟ್ಟಿನಲ್ಲಿ ಈ ಶಾಲೆಯ ಮಾದರಿ ಚುನಾವಣೆ ಇತರ ಎಲ್ಲಾ ಶಾಲಾ ಸಂಸತ್ತು ಚುನಾವಣೆಗೆ ಒಂದು ಕೈಗನ್ನಡಿಯಾಗಿಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಸಂಸತ್ತು ರಚನೆ:- ಮುಖ್ಯಮಂತ್ರಿ ಯಾಗಿ ಸಾದಿಕ್, ಉಪ ಮುಖ್ಯಮಂತ್ರಿಯಾಗಿ ಮೇಘನಾ, ಶಿಕ್ಷಣ ಮಂತ್ರಿಯಾಗಿ ಶಾಹಿನ್ ಹಣಕಾಸು ಮಂತ್ರಿಯಾಗಿ ಸೈಯದಿ ಮಾಹಿನ್, ಆರೋಗ್ಯ ಮಂತ್ರಿಯಾಗಿ ಐಖಫೀನಾಜ, ಆಹಾರ ಮಂತ್ರಿಯಾಗಿ ಅನೀಲ ಕುಮಾರ, ಕ್ರೀಡಾ ಮಂತ್ರಿಯಾಗಿ ಇರ್ಫಾನ್, ಸಾಂಸ್ಕೃತಿಕ ಮಂತ್ರಿಯಾಗಿ ಜನನಿ, ನೀರಾವರಿ ಮಂತ್ರಿಯಾಗಿ ಯಾಸೀನ್, ವಾರ್ತಾ ಮಂತ್ರಿಯಾಗಿ ಅಶ್ವಿನಿ ಕೆ, ಸ್ವಚ್ಚತಾ ಮಂತ್ರಿಯಾಗಿ ಅಫ್ತಬ್, ಕಾನೂನು ಮಂತ್ರಿಯಾಗಿ ಕವಿತಾ, ಗ್ರಂಥಾಲಯ ಮಂತ್ರಿಯಾಗಿ ಮಹೇರುನ್ನಿಸ್, ತೋಟಗಾರಿಕೆ ಮಂತ್ರಿಯಾಗಿ , ನಾಸಿರ್ ಹುಸೇನ್, ವಿರೋಧ ಪಕ್ಷದ ನಾಯಕಿಯಾಗಿ ತನುಜಾ, ಅಭಿವೃದ್ಧಿ ಮಂತ್ರಿಯಾಗಿ ಸಫಿಯಾ ಆಯ್ಕೆಯಾಗಿದ್ದಾರೆ.