ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:- ವಾಹನ ಸವಾರರೇ ಎಚ್ಚರ ಅತಿಯಾದ ವೇಗದ ಚಲಾವಣೆಯಿಂದ ಬಾರಿ ದಂಡ ವಿಧಿಸಲಾಗುತ್ತದೆ ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಈ ಕಠಿಣ ನಿರ್ಧಾರ ಕೈಗೊಂಡಿದೆ .
ಇದು ಏನಂದರೆ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ವಲಯದ ವೇಗಮಿತಿ ಮೀರಿದರೆ ದ್ವಿಚಕ್ರ ವಾಹನ ಸೇರಿದಂತೆ ಎಲ್ಲಾ ವಾಹನಗಳಿಗೂ ದಂಡ ವಿಧಿಸಲಾಗುತ್ತದೆ ಇದಕ್ಕಾಗಿಯೇ ಸರ್ಕಾರವು ಕೈಗೊಂಡಿದ್ದು ಇಲಾಖೆಗೆ ಸ್ಪೀಡ್ ಡಿಟೆಕ್ಟರ್ ಗನ್ ರೇಡಾರ್ ಜಿಪಿಎಸ್ ಕ್ಯಾಮೆರಾವನ್ನು ಪೋಲಿಸ್ ಇಲಾಖೆಗೆ ನೀಡಲಾಗಿದೆ.
Video Player
00:00
00:00
ಈ ಯಂತ್ರದಲ್ಲಿ ದೂರದಿಂದ ಬರುವ ವಾಹನಗಳ ವೇಗಮಿತಿಯನ್ನು ಕಾಣಬಹುದಾಗಿದೆ ಆದ್ದರಿಂದ ವಾಹನ ಸವಾರರು ಇನ್ನು ಮುಂದೆ ಎಚ್ಚರವಾಗಿ ಇರಬೇಕೆಂದು ಪಿಎಸ್ಐ ಮಲ್ಲಪ್ಪ ವಜ್ರದ ಹೇಳಿದರು. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಆದೇಶ, ಹನುಮಂತ, ಯಮನೂರ, ಕರಿಯಪ್ಪ, ಗೀತಮ್ಮ ಸೇರಿದಂತೆ ಸಿಬ್ಬಂದಿಯು ಹಾಜರಿದ್ದರು,
Video Player
00:00
00:00