ತಾವರಗೇರಾ:- ವಿದ್ಯೂತ್ ತಂತಿ ತಗುಲಿ, ಎತ್ತಿನೊಂದಿಗೆ ರೈತ ಸಾವು..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:– ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನೊಬ್ಬ ತನ್ನ ಎತ್ತಿನೊಂದಿಗೆ ಆಕಸ್ಮಿಕ ವಿದ್ಯುತ್ ತಗಲಿ ಸಾವನ್ನಪ್ಪಿದ ಘಟನೆ ಸಮೀಪದ ಚಿಕ್ಕತೆಮ್ಮಿನಾಳ ಗ್ರಾಮದಲ್ಲಿ ನಡೆದಿದೆ.
ಮೃತ ರೈತನನ್ನು ಬಸವರಾಜ್ ವೆಂಕಪ್ಪ ಸಾಸಲಮರಿ (38) ಎಂದು ಗುರುತಿಸಲಾಗಿದೆ.

ಹೊಲದಲ್ಲಿ ಎಡೆ ಒಡೆಯುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸ್ ಇಲಾಖೆಯವರು ಹಾಗೂ ಕೆಇ‌ಬಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ , ಶಾಸಕರಾದ ದೊಡ್ಡನಗೌಡ ಪಾಟೀಲ್ ಅವರು ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿ, ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.

 

Share this Article
error: Content is protected !!