ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:- ಸಾಮೂಹಿಕ ವಿವಾಹಗಳು ನಡೆಸಿಕೊಡುವುದು ಬಡವರ ಬದುಕಿನಲ್ಲಿ ಆಶಾ ಕಿರಣವಾದಂತಾಗಿದ್ದು ತಮ್ಮ ಮಗನ ಮದುವೆ ಜೊತೆ ಗೆ , 40 ಜೋಡಿಗಳ ವಿವಾಹವನ್ನು ನಡೆಸಿಕೊಟ್ಟಿರುವುದು, ವೀರಭದ್ರಪ್ಪ ನಾಲತವಾಡ ಇವರ ಕುಟುಂಬದ ಸಾಧನೆ ಎಂದು ವಿಧಾನಸಭೆಯ ಪ್ರತಿಪಕ್ಷದ ಮುಖ್ಯ ಸಚೇತಕರು ಹಾಗೂ ಶಾಸಕರಾದ ದೊಡ್ಡನಗೌಡ ಪಾಟೀಲ್ ಹೇಳಿದರು.
ಅವರು ಪಟ್ಟಣದಲ್ಲಿ ವೀರಭದ್ರಪ್ಪ ನಾಲತವಾಡ ಅವರ ಮಗನಾದ ಅರುಣ್ ಕುಮಾರ್ ನಾಲತವಾಡ ವಿವಾಹದ ಜೊತೆಗೆ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು, ದಿವಂಗತ ಗುಂಡಪ್ಪ ನಾಲತವಾಡ ಇವರ ಸಹಾಯಾರ್ಥವಾಗಿ ಅದ್ದೂರಿಯಾಗಿ ಸಾಮೂಹಿಕ ವಿವಾಹಗಳು ನಡೆಸಿ, ಬಡಜನರ ಖರ್ಚನ್ನು ಕಡಿಮೆ ಮಾಡುವುದರ ಜೊತೆಗೆ ಇಂತಹ ಸಮಾಜ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಗಣ್ಯರು, ಮಠಾಧೀಶರು, ಪಟ್ಟಣದ ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಎಪಿಎಂಸಿ ಆವರಣದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ವಧು-ವರರನ್ನು ವಿವಿಧ ಮಠಾಧೀಶರು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ವಿವಿಧ ಗಣ್ಯರು, ಮಠಾಧೀಶರು, ಪಟ್ಟಣದ ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಎಪಿಎಂಸಿ ಆವರಣದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ವಧು-ವರರನ್ನು ವಿವಿಧ ಮಠಾಧೀಶರು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಶಿವರಾಜ್ ತಂಗಡಗಿ, ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ, ಶಾಸಕರಾದ ವಿಜಯಾನಂದ ಕಾಶಪ್ಪನವರ್, ಮಾಜಿ ಶಾಸಕ ಜಿ ವಿರಪ್ಪ ಕೆಸರಟ್ಟಿ, ದೇವೇಂದ್ರಪ್ಪ ಬಳೊಟಿಗಿ, ಡಾಕ್ಟರ್ ಬಸವರಾಜ್ ಕ್ಯಾವಟರ, ಸೇರಿದಂತೆ ಪ್ರಮುಖರು ಹಾಜರಿದ್ದರು.