ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:- ಸ್ಥಳೀಯ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ ಕಳಸ ಕುಂಭ, ಜಾನಪದ ನೃತ್ಯ ಮತ್ತು ವಾಧ್ಯಗಳೊಂದಿಗೆ ವೀರಭದ್ರೇಶ್ವರ ಭಾವಚಿತ್ರ ಮೆರವಣಿಗೆಯು ಅದ್ದೂರಿಯಾಗಿ ನಡೆಯಿತು.
ನಂತರ ದೇವಸ್ಥಾನದಲ್ಲಿ ಅಗ್ನಿಕುಂಡ , ಅಯ್ಯಾಚಾರ ಹಾಗು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.
ಜಾತ್ರೆ ಪ್ರಯುಕ್ತ ವಸ್ತು ಪ್ರದರ್ಶನ ಮತ್ತು ಆರೋಗ್ಯ ಇಲಾಖೆಯು ಹಾಗೂ ಗವಿಸಿದ್ದೇಶ್ವರ ಖಾಸಗಿ ಆಸ್ಪತ್ರೆಯ ಆಡಳಿತದಿಂದ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
ರಥೋತ್ಸವ:- ಸಾಯಂಕಾಲ 6 ಗಂಟೆಗೆ ವೀರಗಾಸೆ, ಜಾನಪದ ನೃತ್ಯದೊಂದಿಗೆ ಭಕ್ತರಿಂದ ವಿಜೃಂಭಣೆಯ ಮಹಾರಥೋತ್ಸವ ಜರುಗಿತು.
ದೇವಸ್ಥಾನ ಜಾತ್ರಾ ಸಮಿತಿ ಮತ್ತು ಪೊಲೀಸ್ ಇಲಾಖೆ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಸಲಾಗಿತ್ತು. ಹೋಬಳಿ ವ್ಯಾಪ್ತಿಯ ಗ್ರಾಮಗಳು ಸೇರಿದಂತೆ ಮತ್ತು ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.