Tuesday , September 17 2024
Breaking News
Home / Breaking News / ತಾವರಗೇರಾ:- ಅಪ್ರಾಪ್ತ ಬಾಲಕಿ ಅಪಹರಣ..!

ತಾವರಗೇರಾ:- ಅಪ್ರಾಪ್ತ ಬಾಲಕಿ ಅಪಹರಣ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಕಾಲೇಜಿಗೆ ಹೋಗಿ ಬರುವದಾಗಿ ಹೇಳಿದ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿದ ಘಟನೆ ಜರುಗಿದೆ.

ಸಮೀಪದ ತೆಗ್ಗಿಹಾಳ ಗ್ರಾಮದ 16 ವರ್ಷ ವಯಸ್ಸಿನ ಬಾಲಕಿಯು ಡಿಸೆಂಬರ್ 13 ರಂದು ಕಾಲೇಜಿಗೆ ಹೋಗಿ ಬರುತ್ತೆನೆ ಎಂದು ಹೇಳಿ , ವಾಪಸ್ ಮನೆಗೆ ಬಂದಿರುವದಿಲ್ಲ , ಮಗಳು ಕಾಣೆಯಾದ ಬಗ್ಗೆ ಪಾಲಕರು ಸಂಭಂದಿಕರ ಊರುಗಳಾದ ಕುಷ್ಟಗಿ, ಮಾದಾಪುರ, ಹಿರೇತೆಮ್ಮಿನಾಳ , ಟೆಂಗುಂಟಿ ಗ್ರಾಮಗಳಲ್ಲಿ ತೆರಳಿ ಹುಡುಕಿದಾಗ ಬಾಲಕಿ ಪತ್ತೆಯಾಗಿರುವುದಿಲ್ಲ , ಯಾರೋ ದುಷ್ಕರ್ಮಿಗಳು ತಮ್ಮ ಮಗಳನ್ನು ಅಪಹರಣ ಮಾಡಿದ್ದಾರೆಂದು ,ಬಾಲಕಿಯ ತಂದೆ ನೀಡಿದ ದೂರಿನ ಅನ್ವಯ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಅಪಹರಣ ಮಾಡಿದ ದುಷ್ಕರ್ಮಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡು ಮಗಳನ್ನು ಹುಡುಕಿ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ‌. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪಿಎಸ್ ಐ ನಾಗರಾಜ ಕೊಟಗಿ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!