ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:- ಈ ದೇಶದ ಶೋಷಿತ ಜನರಿಗಾಗಿ, ನೋವಿನಿಂದ ನರಳುತ್ತಿರುವ ಜನರ ಏಳಿಗೆಗಾಗಿ ಶ್ರಮೀಸಿದ್ದಾರೆ ಅಂತವರಲ್ಲಿ ಆನಂದ ಭಂಡಾರಿ ಒಬ್ಬರು ಎಂದು
ಹಿರಿಯ ಹೋರಾಟಗಾರ ಹೆಚ್ ಎನ್ ಬಡಿಗೇರ ಹೇಳಿದರು.
ಪಟ್ಟಣದ ಬುದ್ದ ವಿಹಾರದಲ್ಲಿ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಹಾಗೂ ಪ್ರಗತಿಪರ ದಲಿತ ಸಂಘಟನೆಗಳು ರಾಯಚೂರು-ಕೊಪ್ಪಳ ವತಿಯಿಂದ ಹಮ್ಮಿಕೊಂಡಿದ್ದ ಹಿರಿಯ ದಲಿತ ನಾಯಕ ದಿ. ಆನಂದ ಭಂಡಾರಿ ಯವರಿಗೆ ನುಡಿ ನಮನ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಲಿತರನ್ನು ನಾಯಿ, ನರಿಗಳಿಂತ ಕೀಳಾಗಿ ಕಾಣುತ್ತಿದ್ದ ಆ ಕಾಲದಲ್ಲಿ ನಮ್ಮ ದಲಿತ ನಾಯಕರು ಅವರ ವಿರುದ್ಧ ಧ್ವನಿ ಎತ್ತಿ ಹೋರಾಟ ಮಾಡಿದರು, ತಮ್ಮ ಕುಟುಂಬವನ್ನು ದಿಕ್ಕರಿಸಿ ಜನರಿಗಾಗಿ ಶ್ರಮಿಸಿದ್ದಾರೆ, ಸಿದ್ದಾಂತ ಇರದ ಹೋರಾಟಗಳು ನಮ್ಮನ್ನು ದಿಕ್ಕು ತಪ್ಪಿಸುತ್ತವೆ. ಹೋರಾಟಕ್ಕೆ ಸಿದ್ದಾಂತ ಮತ್ತು ಬದ್ದತೆ ಇರಬೇಕು. ನಾವು ನಿರಂತರವಾಗಿ ಹೋರಾಟ ಮಾಡುತ್ತಾ ಹಲವು ನಾಯಕರು ತಮ್ಮ ಪ್ರಾಣವನ್ನೆ ತೆತ್ತಿದ್ದಾರೆ. ಜನರಿಗೆ ನ್ಯಾಯಕೊಡಿಸುವಲ್ಲಿ ಶ್ರಮಿಸಿದ ಶ್ರಮಿಕರಲ್ಲಿ ಆನಂದ ಭಂಡಾರಿ ಒಬ್ಬರು.
ಲಕ್ಷಾಂತರ ಜನರ ಬದುಕು ಬದಲಾವಣೆ ಮಾಡಿದ್ದಾರೆ. ಎಲ್ಲಾ ವರ್ಗದ ಜನರಿಗೆ ಸಮನವಾಗಿ ಬದುಕುವ ಹಕ್ಕನ್ನು ನೀಡಿದ್ದಾರೆ.
ನಂತರ ಡಿ ಹೆಚ್ ಪೂಜಾರ ಮಾತನಾಡಿ, ಬೌತಿಕವಾಗಿ ನಮ್ಮಿಂದ ದೂರವಿರ ಬಹುದು ಭಂಡಾರಿಯವರು ಆದರೆ ಅವರ ಹೋರಾಟ ಹೆಜ್ಜೆಗಳು ಅವರ ಮಾರ್ಗದರ್ಶನಗಳು ನಮ್ಮೊಂದಿಗಿವೆ. ಹೋರಾಟದ ಹಾದಿಗಳು ಗಟ್ಟಿಯಾಗಬೇಕು. ಹೋರಾಟಗಾರರನ್ನು ಭ್ರಷ್ಟನ್ನಾಗಿ ಮಾಡಿ ಅವರನ್ನು ಅತ್ತಿಕ್ಕುವ ಹುನ್ನಾರ ನಡೆಯುತ್ತಿವೆ.
ಆರ್ ಕೆ ದೇಸಾಯಿ ಮಾತನಾಡಿ, ಚಳುವಳಿಗಳನ್ನು ಬಲಿಷ್ಠ ಗೊಳಿಸಬೇಕು. ದಲಿತ ಕೆರೆಗಳು ಸಿಸಿ ರಸ್ತೆಗಳಾಗಿವೆ. ಆದರೆ ಶೈಕ್ಷಣಿಕ, ಆರ್ಥಿಕವಾಗಿ ಮುಂದೆ ಬರಬೇಕಾಗಿದೆ.
ಸಾಹಿತಿ ಹಾಗು ಹೋರಾಟಗಾರ
ದಾನಪ್ಪ ನಿಲೋಗಲ್ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಗುರುಪಾದಮ್ಮ ಭಂಡಾರಿ, ಎಂ ವೀರುಪಾಕ್ಷ, ಹೆಚ್ ಎನ್ ಬಡಿಗೇರ, ಎಕೆ ಭಾರಧ್ವಜ, ಬಸಲಿಂಗಪ್ಪ ಲಿಂಗಸೂರು, ವಕೀಲ ಆರ್ ಕೆ ದೇಸಾಯಿ, ರಾಜಾಸಾಬ ಬಾಳೆಕಾಯಿ, ಡಿ ಹೆಚ್ ಪೂಜಾರ, ಚಿನ್ನಪ್ಪ ಕೊಟ್ರಕಿ, ಅಲ್ಲಮ್ಮಪ್ರಭು ಪೂಜಾರಿ, ರಾಮಣ್ಣ ಬೇರಗಿ, ಶುಕ್ರರಾಜ ತಾಳಕೇರಿ, ಶ್ರೀಶೈಲ, ಮಾಲತಿ ನಾಯಕ, ಕರಿಯಪ್ಪ ಗುಡಿಮನಿ, ರಂಗಪ್ಪ , ಎಂ ಆರ್ ಭೇರಿ,ಸ್ಥಳಿಯ ಮುಖಂಡರಾದ ಸಾಗರ ಭೇರಿ, ದುರಗೇಶ ನಾರಿನಾಳ, ಸಂಜೀವ ಚಲುವಾದಿ,ಗೌತಮ್ ಭಂಡಾರಿ, ಅಮರೇಶ ಚಲುವಾದಿ, ಹುಸೇನಪ್ಪ ಮುದೇನೂರು,ನಾಗರಾಜ ನಂದಾಪೂರು,
ದುರಗೇಶ, ಗಣೇಶ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಶರಣಪ್ಪ ನಿರೂಪಿಸಿದರು, ಭೀಮಣ್ಣ ಹವಳೆ ಸ್ವಾಗತಿಸಿ, ವಂದಿಸಿದರು.