ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಸಮೀಪದ ಸಂಗನಾಳ ಗ್ರಾಮದ ಜಮೀನೊಂದಕ್ಕೆ ಸಂಬಂಧಿಸಿದಂತೆ ಸುಡಗಾರ ಸಿದ್ದರ ಕುಟುಂಗಳ ಕಲಹಕ್ಕೆ ಸಂಬಂಧಿಸಿದಂತೆ , ಕುಟುಂಬಗಳ ಬಹಿಷ್ಕಾರದ ಸುದ್ದಿ ತಿಳಿಯುತ್ತಿದ್ದಂತೆ , ಸೋಮವಾರದಂದು ಶಾಸಕ ದೊಡ್ಡನಗೌಡ ಪಾಟೀಲ, ಸಿಪಿಐ ಯಶವಂತ ಬೀಸನಳ್ಳಿ ಇಲ್ಲಿನ ಬಸವಣ್ಣ ಕ್ಯಾಂಪಿನ ಸಿದ್ಧರ ಸಮುದಾಯ ಭವನದಲ್ಲಿ ಶಾಂತಿ ಸಭೆ ಏರ್ಪಡಿಸಿದ್ದರು.
ಸಂಗನಾಳ ಗ್ರಾಮದ 27 ಎಕರೆ ಜಮೀನಿಗೆ ಸಂಬಂಧ ಪಟ್ಟ ಫಕೀರಪ್ಪ ಮತ್ತು ಇತರ ನಾಲ್ಕು ಜನ ಹಾಗೂ ಗೋಪಾಲ ಮತ್ತು ಇತರರು ಸೇರಿ ಒಟ್ಟು 12 ಜನ ಜಗಳ ವಾಡಿದ್ದರು. ಈ ಪ್ರಕರಣ ನ್ಯಾಯಾಲಯದಲ್ಲಿದೆ ಆದರೂ ಈ ಎರಡು ಕುಟುಂಬದವರು ಜಗಳ ವಾಡಿದ್ದರು.
ಶಾಸಕ ದೊಡ್ಡನಗೌಡ ಪಾಟೀಲರ ನೇತೃತ್ವದಲ್ಲಿ , ಕುಷ್ಟಗಿ ಸಿ.ಪಿ.ಐ. ಯಶವಂತ ಬಿಸನಳ್ಳಿ , ಪಿಎಸ್ಐ ನಾಗರಾಜ ಕೋಟಗಿ ಯವರು ಸೇರಿ ಉಭಯ ಕುಟುಂಬಕ್ಕೆ ತಿಳಿ ಹೇಳಿದರು, ಮತ್ತು ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಾಲಚಂದ್ರ ಸಂಗನಾಳ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಯಲ್ಲಮ್ನ ಹಂಡಿ, ಹಿಂದುಳಿದ ವರ್ಗಗಳ ಇಲಾಖೆಯ ಶ್ರೀನಿವಾಸ ನಾಯಕ , ಮುಖಂಡರಾದ , ಬಸವರಾಜ ಹಳ್ಳೂರ, ಚಂದ್ರಕಾಂತ ವಡಗೇರಿ, ಸಾಗರ ಭೇರಿ, ಶಿವನಗೌಡ ಪೊಲೀಸ್ ಪಾಟೀಲ , ಶಾಮೂರ್ತಿ ಅಂಚಿ, ಶಿವನಗೌಡ ಪುಂಡಗೌಡರ, ಲಕ್ಷ್ಮಣ ಮುಖಿಯಾಜಿ, ಕೃಷ್ಣಪ್ಪ ಸೇರಿದಂತೆ ಇನ್ನಿತರರು ಇದ್ದರು.