Tuesday , September 17 2024
Breaking News
Home / Breaking News / ಬಸ್ ಪಲ್ಟಿ ಹಲವು ಜನರಿಗೆ ತೀವ್ರ ಗಾಯ..!

ಬಸ್ ಪಲ್ಟಿ ಹಲವು ಜನರಿಗೆ ತೀವ್ರ ಗಾಯ..!

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ: ತಾಲೂಕಿನ ದೋಟಿಹಾಳ ದಿಂದ ಮಂಗಳೂರಿಗೆ ಹೊರಟಿದ್ದ ಬಸ್ ವೊಂದು ಪಲ್ಟಿಯಾಗಿ, ಹಲವಾರು ಪ್ರಯಾಣಿಕರಿಗೆ ತೀವ್ರ ಗಾಯವಾದ ಘಟನೆ ಭಾನುವಾರ ಸಂಜೆ ನಡೆದಿದೆ.

ಮಂಗಳೂರು ಡಿಪೋ ಬಸ್ ದೋಟಿಹಾಳ ದಿಂದ ಮಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ತಾಲೂಕಿನ ಮಿಯಾಪುರ ಬಳಿ ಹಳ್ಳದ ಹತ್ತಿರ ಉರುಳಿ ಬಿದ್ದ ಪರಿಣಾಮ ಬಸ್ ನಲ್ಲಿದ್ದ ಹಲವು ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿದ್ದು ಯಾವುದೇ ಜೀವ ಹಾನಿ ಸಂಭಂವಿಸಿಲ್ಲ ಎಂದು ವರದಿಯಾಗಿದ್ದು ಮಂಗಳೂರಿಗೆ ದುಡಿಯಲು ತೆರಳುತ್ತಿದ್ದ , ಬಹುತೇಕ ಗ್ರಾಮೀಣ ಭಾಗದ ಕೂಲಿ ಕಾರರು ಬಸ್ ನಲ್ಲಿದ್ದರು ಎಂದು ತಿಳಿದುಬಂದಿದೆ.

ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಕುಷ್ಟಗಿ, ಹನುಮಸಾಗರ , ಇಲಕಲ್ಲ ಸೇರಿದಂತೆ ವಿವಿಧ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

ಈ ಕುರಿತು ಕುಷ್ಟಗಿ ಹಾಗೂ ಹನಮಸಾಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!