Tuesday , September 17 2024
Breaking News
Home / Breaking News / ಮುದಗಲ್ : ಮಲ್ಲಿಕಾರ್ಜುನ ಸ್ಟುಡಿಯೋ ಆಪ್ ಬಿಡುಗಡೆ

ಮುದಗಲ್ : ಮಲ್ಲಿಕಾರ್ಜುನ ಸ್ಟುಡಿಯೋ ಆಪ್ ಬಿಡುಗಡೆ

ಮುದಗಲ್ : ಪಟ್ಟಣದ ಶ್ರೀ ಮಲ್ಲಿಕಾರ್ಜುನ ಫೋಟೋ ಸ್ಟುಡಿಯೋ ಆಪ್ ಬಿಡುಗಡೆ ಮಾಡಲಾಯಿತು.

ರವಿವಾರ ಪಟ್ಟಣದ ಭಾರತ್ ಕಲ್ಯಾಣ ಮಂಟಪದಲ್ಲಿ ನಡೆದ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ
ಶ್ರೀ ಮಹಾಂತ ಸ್ವಾಮೀಜಿ ರವರು ಮಲ್ಲಿಕಾರ್ಜುನ ಸ್ಟುಡಿಯೋ ಹಾಗೂ ಭಾರತ್ ಕಲ್ಯಾಣ ಮಂಟಪ ಇವರ ಸಹಯೋಗದಲ್ಲಿ ರೂಪಗೊಂಡ ಶ್ರೀ ಮಲ್ಲಿಕಾರ್ಜುನ ಸ್ಟುಡಿಯೋ ಆಪ್ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಶ್ರೀಗಳು ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಂತಹ ಹೊಸತನದ ಬೆಳವಣಿಗೆ ಮಾಡುವಲ್ಲಿ ಮುದಗಲ್ಲಿನ ಮಲ್ಲಿಕಾರ್ಜುನ ಸ್ಟುಡಿಯೋ ಹಾಗೂ ಭಾರತ್ ಕಲ್ಯಾಣ ಮಂಟಪ ಮಾಲೀಕರು ಜಂಟಿಯಾಗಿ ಗ್ರಾಹಕಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾದದ್ದು
ಆಧುನಿಕ ಜಗತ್ತಿನಲ್ಲಿ ಇಂತಹ ಬೆಳವಣಿಗೆ ಅವಶ್ಯ ಎಂದರು.ನಂತರ ಮಾತನಾಡಿದ  ಸ್ಟುಡಿಯೋ ಮಾಲೀಕರಾದ ನಾಗರಾಜ ಮಡಿವಾಳರ ಈ ಆಪ್ ಲಿಂಗಸಗೂರು ತಾಲೂಕಿನಲ್ಲೇ ಪ್ರಪ್ರಥಮ ವಾಗಿದೆ ನಮ್ಮ ಸ್ಟುಡಿಯೋ ಆಪ್ ನಿಂದ ಗ್ರಾಹಕರು ಕುಳಿತಲ್ಲೇ ತಮ್ಮ ಕಾರ್ಯಕ್ರಮಗಳ ಫೋಟೋ ಸೆಲೆಕ್ಷನ್ ಮಾಡಬಹುದು ಹಾಗೂ ಕಾರ್ಯಕ್ರಮಗಳ ಲೈವ್ ನಲ್ಲಿಯೇ ಫೋಟೋ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಇದರಿಂದ ಗ್ರಾಹಕರಿಗೆ ಸಮಯ ಉಳಿತಾಯವಾಗಲಿದೆ ಹಾಗೂ ಶೀಘ್ರದಲ್ಲಿ ತಮ್ಮ ಕಾರ್ಯಕ್ರಮಗಳ ಫೋಟೋಗಳು ಹಾಗೂ ಈ -ಆಲ್ಬಮ್ ದೊರೆಯಲಿವೆ ಇದರ ಪ್ರಯೋಜನವನ್ನ ನಮ್ಮ ಗ್ರಾಹಕರು ಪಡೆದುಕೊಳ್ಳಬಹುದು ಎಂದರು.ಈ ಸಂದರ್ಭದಲ್ಲಿ ಉಮೇಶ್ ರೇವಳಿಮಠ, ಬದ್ರಿನಾಥ್ ತಾವರಗೇರ, ನೀಲಕಂಠ ಜೀಡಿ,ಯಮನೂರ ನದಾಫ್, ಹೈಮದ್ ಬೆಳ್ಳಿಕಟ್ ಸೇರಿದಂತೆ ಇನ್ನಿತರರು ಇದ್ದರು.

 

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!