ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:– ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳಸಿದ್ದ ಸ್ಥಳಕ್ಕೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡ ಘಟನೆ ಶನಿವಾರದಂದು ನಡೆದಿದೆ .
ಜಿಲ್ಲಾ ಎಸ್ ಪಿ ಹಾಗೂ ಗಂಗಾವತಿ ಡಿವಾಯ ಎಸ್ ಪಿ ಇವರ ಮಾರ್ಗದರ್ಶನದಲ್ಲಿ ಕುಷ್ಟಗಿ ಸಿಪಿಐ ಯಶವಂತ ಬೀಸನಳ್ಳಿ ನೇತೃತ್ವದ ಸ್ಥಳೀಯ ಪಿಎಸ್ ಐ ನಾಗರಾಜ ಕೊಟಗಿ ಹಾಗೂ ತಂಡದವರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು ,
ಠಾಣಾ ವ್ಯಾಪ್ತಿಯಲ್ಲಿ ಬರುವ ಮ್ಯಾದರಡೊಕ್ಕಿ ಗ್ರಾಮದ ಸರ್ವೇ ನಂ 104 ರ ಜಮೀನಿನಲ್ಲಿ ಖತರ್ನಾಕ ಆರೋಪಿಯು , ತೆಂಗಿನ ಗಿಡ( ಕಲ್ಪ ವೃಕ್ಷ) ಜೊತೆಗೆ ಗಾಂಜಾ ಗಿಡವನ್ನು ಬೆಳೆಸಿ ಮಾರಾಟ ಮಾಡಲು ಯತ್ನಿಸಿದ್ದು ಈ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆಯೇ ಸ್ಥಳೀಯ ಪಿಎಸ್ ಐ ಹಾಗೂ ಸಿಬ್ಬಂದಿಗಳಾದ ಬಸವರಾಜ ಇಂಗಳದಾಳ, ಮಹ್ಮದ್ ರಫೀ, ವಿರೇಶ, ಶರಣಬಸವ, ಕರಿಯಪ್ಪ ಇವರೊಂದಿಗೆ ಗೆಜೆಟೆಡ್ ಅಧಿಕಾರಿ ಅರುಣಾ ಕುಮಾರಿ ಯೊಂದಿಗೆ ಜಮೀನಿಗೆ ತೆರಳಿ ಗಾಂಜಾ ಗಿಡವನ್ನು ಕಿತ್ತು ಹಾಕುವ ಮೂಲಕ ಪ್ರಕರಣ ಪತ್ತೆ ಹಚ್ಚಿದ್ದು, ಆರೋಪಿಯ ಪರಾರಿಯಾಗಿದ್ದಾನೆ, ಆತನ ಬಲೆಗೆ ಜಾಲ ಬೀಸಿದ್ದಾರೆ .
ಒಟ್ಟು 9 ಕೆಜಿ 800 ಗ್ರಾಂ ತೂಕದ 5 ಹಸಿ ಗಾಂಜಾ ಗಿಡಗಳನ್ನು ಜಪ್ತಿಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.