Sunday , September 8 2024
Breaking News
Home / Breaking News / ತಾವರಗೇರಾ: ಬೃಹತ್ ರಕ್ತದಾನ ಶಿಬಿರ..!

ತಾವರಗೇರಾ: ಬೃಹತ್ ರಕ್ತದಾನ ಶಿಬಿರ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಗಜಾನನೋತ್ಸವ ದ ಅಂಗವಾಗಿ ಸ್ಥಳೀಯ ಲಿಯೋ ಯುಥ್ ಕ್ಲಬ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಅಂಜನಾದ್ರಿ ರಕ್ತ ಬಂಡಾರ ಗಂಗಾವತಿ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರದಂದು ಪಂಚಾಯತ್ ಮುಂಬಾಗದಲ್ಲಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

 

ಈ ಸಂದರ್ಭದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಅಮರೇಶ ಕಾರಟಗಿ, ಮಂಜುನಾಥ್ ಜುಲುಕುಂಟಿ,ರಾಜಶೇಖರ್, ಚೆನ್ನಪ್ಪ ಗೌಡ ಇವರನ್ನು ಲಿಯೋ ಯುಥ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ. ಕಾವೇರಿ ಶಾವಿ ಹಾಗೂ ಕೆಇಬಿಯ ಎಸ್ಓ ರಶ್ಮಿ ಚೌಹಾನ್ ಹಾಗೂ ಲಿಯೋ ಯುಥ್ ಕ್ಲಬ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಿಬಿರದಲ್ಲಿ ಹೆಚ್ಚಿನ ಯುವಕರು ಹಾಗೂ ಯುವತಿಯರು ಪಾಲ್ಗೊಂಡು ರಕ್ತದಾನ ಮಾಡಿದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!