ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:- ಶಿಕ್ಷಕರು ನಾಡಿನ ಶಿಲ್ಪಿಗಳು ಗುರುವಿನ ಸ್ಥಾನ ಏನೆಂಬುದನ್ನು ತೋರಿಸಿಕೊಟ್ಟ ಆದರ್ಶ ಶಿಕ್ಷಕರ ಸಾಲಿನಲ್ಲಿ ಸತತ 13 ವರ್ಷಗಳ ಕಾಲ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಿ ನಂತರ ವರ್ಗಾವಣೆಗೊಂಡು ತೆರಳುವಾಗ ಇಡೀ ಗ್ರಾಮವೇ ಅವರನ್ನು ಕೊಂಡಾಡಿದ್ದಲ್ಲದೆ ದುಃಖ ಭರಿತಗೊಂಡ ಘಟನೆ ಸಮೀಪದ ಕನಕಗಿರಿ ತಾಲೂಕಿನ ಯತ್ನಟ್ಟಿ ಗ್ರಾಮದಲ್ಲಿ ನಡೆದಿದೆ.
ಇವರ ಹೆಸರು ಸುರೇಶ್ ಬಿ ಇವರು ಮೂಲತ ಮೈಸೂರು ಜಿಲ್ಲೆಯ ನರಸೀಪುರ ತಾಲೂಕಿನ ಈಶ್ವರ ಗೌಡನಹಳ್ಳಿ ಗ್ರಾಮದವರಾಗಿದ್ದು, ಶಿಕ್ಷಕರಾಗಿ ಯತ್ನಟ್ಟಿ ಗ್ರಾಮಕ್ಕೆ ಆಗಮಿಸಿ ಇಲ್ಲಿ ಸೇವೆ ಸಲ್ಲಿಸಿ 14 – 9 – 2023 ರಂದು ಸ್ವಂತ ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ ಆದರೆ ಇವರ ಸೇವಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳ ಹಾಗೂ ಪಾಲಕರ ಪ್ರೀತಿಗೆ ಪಾತ್ರರಾಗಿದ್ದಲ್ಲದೆ ಅನೇಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಾಯದ ಜೊತೆಗೆ ತಮ್ಮ ಸ್ವಂತ ಖರ್ಚಿನಿಂದ ವಸತಿ ಶಾಲೆಗಳಿಗೆ ಸೇರಿಸಿದ ಕೀರ್ತಿ ಕೂಡ ಇವರದ್ದಾಗಿದೆ.
ಶಾಲೆ ಬಿಟ್ಟು ಹೋಗುವಾಗ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಐವತ್ತು ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ, ಕೇವಲ ವೇತನಕ್ಕಾಗಿ ಕೆಲಸ ಮಾಡದೇ, ಅನೇಕ ಶಿಕ್ಷಕರ ಸಾಲಿನಲ್ಲಿ ಇವರು ವಿಭಿನ್ನವಾಗಿ ಕಾಣುವುದರ ಜೊತೆಗೆ ಇತರರಿಗೂ ಮಾದರಿಯಾಗಿದ್ದಾರೆಂದು ಗ್ರಾಮದ ಚೆನ್ನಪ್ಪ ಹೆಮ್ಮೆಯಿಂದ ಉದಯವಾಹಿನಿಗೆ ತಿಳಿಸಿದ್ದಾರೆ.