ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಅಪ್ಪಟ ಕಲ್ಯಾಣ ಕರ್ನಾಟಕದ ಕಲಾವಿದರೆಲ್ಲರು ಸೇರಿ ಅದರಲ್ಲೂ ಸಿಂಧನೂರ ನ ಹುಡುಗ ನಾಯಕ ನಟನಾಗಿ, ಉಡುಪಿಯ ಹುಡುಗಿ ನಾಯಕಿ ನಟಿಯಾಗಿ ನಟಿಸಿರುವ ಅವಳು ಲೈಲಾ ಅಲ್ಲ ನಾನು ಮಜ್ನು ಅಲ್ಲ ಚಿತ್ರವು ಇದೇ ದಿನಾಂಕ 08 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು ಇದನ್ನು ಕುಷ್ಟಗಿ ತಾಲೂಕಿನ ಬಳ್ಳೂಟಗಿ ಗ್ರಾಮದ ಯುವಕ ಯಲ್ಲು ಪುಣ್ಯಕೋಟಿ, ನಿರ್ದೇಶಿಸಿದ್ದಾರೆ.
ಇದೊಂದು ಪ್ರೇಮ ಕಥೆ ಯಾಗಿದ್ದು ಈ ಚಿತ್ರದಲ್ಲಿ ಜುಮಲಾಪುರ ಗ್ರಾಮದ ಪತ್ರಕರ್ತ ಅಮಾಜೆಪ್ಪ ಅವರು ನಾಯಕ ನಟನ ಗೆಳೆಯನಾಗಿ ಅಭಿನಯಿಸಿರುವುದು ಪತ್ರಕರ್ತರೆಲ್ಲರಿಗೂ ಹೆಮ್ಮೆಯ ವಿಷಯ ಜೊತೆಗೆ ಆತನ ಮಗಳಾದ ಪಲ್ಲವಿ ಕೂಡ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ್ದು ತಂದೆ ಮಗಳಿಬ್ಬರು ಕೂಡ ಒಂದೇ ಚಿತ್ರದಲ್ಲಿ ಅಭಿನಯಿಸಿದ್ದು ವಿಶೇಷವಾಗಿದೆ.
ಹಾಸ್ಯ ಪಾತ್ರದಲ್ಲಿ ಕರಡಿ ಸೀನ ಎಂದು ಖ್ಯಾತಿ ಪಡೆದಿರುವ ಡಿಂಗ್ರೀ ನರೇಶ ಅಭಿನಯಿಸಿದ್ದಾರೆ , ಒಟ್ಟಿನಲ್ಲಿ ನಮ್ಮ ಭಾಗದವರು ನಿರ್ಮಾಣ ಹಾಗೂ ನಿರ್ದೇಶಿಸಿ ನಟಿಸಿರುವ ಈ ಚಿತ್ರವು ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಲಿ ಹಾಗು ಸಿನಿಮಾ ಯಶಸ್ವಿಯಾಗಲಿ ಎಂಬುದು ಉದಯವಾಹಿನಿ ಪತ್ರಿಕೆಯ ಆಶಯವಾಗಿದೆ.