Thursday , September 19 2024
Breaking News
Home / Breaking News / ತಾವರಗೇರಾ:- ಡಿಸೇಲ್ ಕಳ್ಳನ ಬಂಧನ..!

ತಾವರಗೇರಾ:- ಡಿಸೇಲ್ ಕಳ್ಳನ ಬಂಧನ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಠಾಣಾ ವ್ಯಾಪ್ತಿಯಲ್ಲಿ 11-08-23 ರಂದು 175 ಲೀಟರ್ ಡಿಸೇಲ್  ಕಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ  ಸ್ಥಳೀಯ ಪೊಲೀಸರು  ಯಶಸ್ವಿಯಾಗಿದ್ದಾರೆ .

ಬಂಧಿತ ಆರೋಪಿಯನ್ನು ಮಸ್ಕಿಯ ಗಾಂಧಿನಗರ ನಿವಾಸಿ ಶಶಿ ಕುಮಾರ ಕುರಿ ಎಂದು ಗುರುತಿಸಲಾಗಿದೆ.

ಆರೋಪಿಯು ಮೆಕಾನಿಕ್ ಆಗಿದ್ದು ಬಂಧಿತ ಆರೋಪಿಯಿಂದ ಡಿಸೇಲ್ ಕಳ್ಳತನ ಮಾಡಿ ಮಾರಾಟ ಮಾಡಿದ 12 ಸಾವಿರ ರೂ ಹಾಗೂ ಕಳ್ಳತನ ಕ್ಕೆ ಬಳಸಿದ 2 ಲಕ್ಷ ಮೌಲ್ಯದ ಹುಂಡಾಯ್ ಕಾರ್ ಸೇರಿದಂತೆ ಒಟ್ಟು 2 ಲಕ್ಷ 12 ಸಾವಿರ ಮೌಲ್ಯ ಹಾಗೂ 3 ಖಾಲಿ ಡಿಸೇಲ್ ಕ್ಯಾನ್ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸ್ಥಳೀಯ ಠಾಣೆಯ ಠಾಣಾಧಿಕಾರಿ ನಾಗರಜ ಕೊಟಗಿ ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಎಎಸ್ ಐ ಮಲ್ಲಪ್ಪ ವಜ್ರದ, ಸಿಬ್ಬಂದಿಗಳಾದ ಯಮನಪ್ಪ, ವಿರೇಶ , ಬಸವರಾಜ ಮಹ್ಮದ್ ರಫೀ, ಚಾಲಕ ಕರಿಯಪ್ಪ ಹಾಗೂ ಕೊಪ್ಪಳ ಸಿಡಿಆರ್ ವಿಭಾಗದ ಕೊಟೇಶ ಒಳಗೊಂಡತೆ ಸ್ಥಳೀಯ ಠಾಣೆಯ ಪಿಎಸ್ ಐ ಇವರ ಕಾರ್ಯಕ್ಕೆ ಜಿಲ್ಲಾ ಎಸ್ಪಿ, ಡಿವಾಯ್ ಎಸ್ ಪಿ ಹಾಗೂ ಕುಷ್ಟಗಿ ಸಿಪಿಐ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!