ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:- ಪಟ್ಟಣದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಸ್ಥಳೀಯ ಎಸ್ಎಸ್ ವಿ ಶಿಕ್ಷಣ ಸಂಸ್ಥೆಯಲ್ಲಿ, ಸಂಸ್ಥೆಯ ಅಧ್ಯಕ್ಷ ಶೇಖರಗೌಡ ಪೊಲೀಸ್ ಪಾಟೀಲ್ ಧ್ವಜಾರೋಹಣ ನೆರವೇರಿಸಿದರು.
ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಕಾವೇರಿ ಶಾವಿ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪಿಎಸ್ ಐ ನಾಗರಾಜ ಕೊಟಗಿ, ಗಾಂಧಿ ವೃತ್ಯದಲ್ಲಿ ನಬೀಸಾಬ ಖುದನ್ನವರ ಧ್ವಜಾರೋಹಣ ನೆರವೇರಿಸಿದರು.
ನಂತರ ಪಟ್ಟಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ಪಪಂ ಮುಖ್ಯಾಧಿಕಾರಿ ನಬಿಸಾಬ ಹೆಚ್ ಖುದಾನವರ್ ಧ್ವಜಾರೋಹಣ ನೇರವೇರಿಸಿದರು.
ಪಟ್ಟಣದ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಪಥ ಸಂಚಲನ ಹಾಗೂ ಛೇದಭಷ್ಮ ಕಾರ್ಯ ಕ್ರಮ ನಡೆಯಿತು.
ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ವೀರಭದ್ರಪ್ಪ ನಾಲತವಾಡ, ಪಪಂ ಸದಸ್ಯರಾದ ಬಸನಗೌಡ ಓಲಿ, ಶಿವನಗೌಡ ಪುಂಡಗೌಡ್ರು, ಶಫೀ ಮುಲ್ಲಾ, ಶ್ಯಾಮೂರ್ತಿ ಅಂಚಿ, ದಶರಥಸಿಂಗ್,ಮರಿಯಮ್ಮ ಬಿಸ್ತಿ, ಬೇಬಿ ರೇಖಾ ಉಪ್ಪಳ, ಅಂಬುಜಾ ಹೂಗಾರ, ನಿವೃತ್ತ ಪಿಎಸ್ ಐ ಸೋಮನಗೌಡ ಪಾಟೀಲ್,
ಶುಕ್ರು ಬನ್ನು, ಅಯ್ಯಣ್ಣ ಓಲಿ, ನಿವೃತ್ತ ಯೋದ ನಾಗರಾಜ ನವಲಗುಂದ, ಸ್ವಾತಂತ್ರ್ಯ ಹೋರಾಟಗಾರ ಪತ್ನಿ ರಾದಮ್ಮ ವೆಂಕನಗೌಡ ಮೆದಿಕೇರಿ, ನಿವೃತ್ತ ಅಧಿಕಾರಿ ಬಸಪ್ಪ ಸೇರಿದಂತೆ ಇನ್ನಿತರ ಗಣ್ಯರು ಇದ್ದರು.
ಮುಖ್ಯಾಧಿಕಾರಿ ನಬಿಸಾಬ ಹೆಚ್ ಖುದಾನವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶರಣಬಸವ ಸೈಂದರ್ ಸ್ವಾಗತಿಸಿದರು, ಮಲ್ಲಿಕಾರ್ಜುನ ಸೂಡಿ ನಿರೂಪಿಸಿದರು.
ಪಟ್ಟಣದ ಶಾಲಾ ಮುಖ್ಯಗುರುಗಳು, ದೈಹಿಕ ಶಿಕ್ಷಕರು ಸೇರಿದಂತೆ ಎಲ್ಲಾ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಾಗೂ ಪಟ್ಟಣ ಪಂಚಾಯತ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.