Thursday , September 19 2024
Breaking News
Home / Breaking News / ನಾಗರ ಹಾವನ್ನು ಬೆದರಿಸಿದ ಬೆಕ್ಕು..!

ನಾಗರ ಹಾವನ್ನು ಬೆದರಿಸಿದ ಬೆಕ್ಕು..!

 

ವರದಿ ಎನ್ ಶಾಮೀದ್ ತಾವರಗೇರಾ

ಕೊಪ್ಪಳ : ಒಂದು ಗಂಟೆಗೂ ಹೆಚ್ಚುಕಾಲ ಹೆಡೆ ಎತ್ತಿದ ನಾಗರ ಹಾವನ್ನು ಬೆಕ್ಕೊಂದು ಅಡ್ಡಗಟ್ಟಿ ಓಡಿಸಿದ ಪ್ರಸಂಗ ತಾಲೂಕಿನ ಬಸಾಪೂರು ಗ್ರಾಮದಲ್ಲಿ ಶನಿವಾರ ಜರುಗಿದೆ.!

ಗ್ರಾಮದ ಹೋಟೆಲ್ ವೊಂದರ ಒಳಗೆ ನುಗ್ಗಲು ಯತ್ನಿಸಿದ ಭಾರಿ ಗಾತ್ರದ ನಾಗರ ಹಾವನ್ನು ಕಂಡ ಅಲ್ಲಿದ್ದ ಸಾಕು ಬೆಕ್ಕು ಹಿಂದಕ್ಕೆ ಹಾಗೂ ಮುಂದಕ್ಕೆ ಚಲಿಸದಂತೆ ಅಡ್ಡಗಟ್ಟಿತು. ಹಾವಿನ ಮೇಲೆ ತನ್ನ ಪಂಜಿನಿಂದ ದಾಳಿಗೆ ಮುಂದಾಗಿತು. ತನ್ನ ರಕ್ಷಣೆಗಾಗಿ ಪ್ರತಿ ದಾಳಿಗೆ ಮುಂದಾದ ಎಡೆ ಎತ್ತಿದ ನಾಗರ ಹಾವು ಸುಮಾರು ಒಂದು ಗಂಟೆ ಕಾಲ ಸೆಣಸಾಟ ನಡೆಸಿದೆ. ಹಾವು ಮತ್ತು ಬೆಕ್ಕಿನ ಸೆಣಸಾಟವನ್ನು ಗ್ರಾಮಸ್ಥರು ಕಣ್ತುಂಬಿಕೊಂಡರೆ, ಕೆಲವರು ಮೊಬೈಲ್ ಕ್ಯಾಮೆರಾ ಮೂಲಕ ವಿಡಿಯೋ ಚಿತ್ರಿಕರಿಸಿದ್ದಾರೆ.

ಸುಮಾರು ಐದಾರು ಅಡಿ ಉದ್ದದ ನಾಗರ ಹಾವು ಹೋಟೇಲ್ ಒಳಗೆ ಪ್ರವೇಶಿಸಿದ್ದರೆ ಯಾರಿಗಾದರೂ ಅಪಾಯ ಎದುರಾಗುವ ಸಂಭವವಿತ್ತು. ಒಟ್ಟಿನಲ್ಲಿ ಮಾರ್ಜಾಲನ ಕಣ್ಣಿಗೆ ಬಿದ್ದ ನಾಗರ ಒಂದು ಗಂಟೆಗೂ ಹೆಚ್ಚು ಸೆಣಸಾಡಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ಸು ಓಡಿ ಹೋಗಿದೆ‌. ನಾಗರನ ಹಿಮ್ಮೆಟ್ಟುವಲ್ಲಿ ಯಶಸ್ಸು ಕಂಡ ಮಾರ್ಜಾಲನ ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.!!

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!