ವರದಿ : ನಾಗರಾಜ್ ಎಸ್ ಮಡಿವಾಳರ
ಮುದಗಲ್ : ಪಟ್ಟಣದ ಎಸ್ ವಿ ಎಂ ಪ್ರೌಢ ಶಾಲೆಯಲ್ಲಿ
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ
ಲಿಂ ಮ ನಿ ಪ್ರ ಡಾ ಮಹಾಂತ ಶಿವಯೋಗಿಗಳ ಜನ್ಮ ದಿನದ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಆಚರಣೆ ಮಾಡಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ವೈದ್ಯರಾದ ಡಾ. ಮಂಜುನಾಥ ಗುಡಿಹಾಳ ಮಾತನಾಡಿದ ಅವರು ವ್ಯಸನ ಅಂದರೆ ವಸ್ತುಗಳ ಬಗ್ಗೆ ಬೆಳಸಿಕೊಳ್ಳವ ವ್ಯಾಮೋಹ ಅತಿಯಾದ ವ್ಯಾಮೋಹ ಅದೆ ವ್ಯಸನವಾಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡುತ್ತದೆ ಕಾರಣ ಯುವಕರು ದುಶ್ಚಟಗಳ ದಾಸರಾಗದೆ ಒಳ್ಳೆಯ ಹವ್ಯಾಸಗಳನ್ನು ರೂಡಿಸಿಕೊಳಬೇಕು ಎಂದರು.
ಎಸ್ ವಿ ಎಮ್ ಶಾಲಾ ಶಿಕ್ಷಕ ದವಲಾಸಾಬ್ ಮಾತನಾಡಿ ಇಳಕಲ್ಲಿನ ಮಹಾಂತಪ್ಪಗಳು ತಮ್ಮ ಇಡೀ ಜೀವನವನ್ನ ಸಮಾಜದ ಅಂಕು – ಡೊಂಕು ಗಳನ್ನ ತಿದ್ದಲು ಮುಡುಪಿಟ್ಟರು ಜೋಳಿಗೆ ಹಿಡಿದು ಜನರ ಬಳಿ ಹೋಗಿ ನಿಮ್ಮ ದುಶ್ಚಟಗಳನ್ನ ನನ್ನ ಜೋಳಿಗೆ ಹಾಕಿ ನೀವು ವ್ಯಾಸನ ಮುಕ್ತರಾಗಿ ಸುಖ ಜೀವನ ಸಾಗಿಸಿ ಎಂದು ಪಾದಯಾತ್ರೆ ಮಾಡಿದ್ದರು ಇಂತಹ ಮಹಾನ್ ವ್ಯಕ್ತಿಯ ಹುಟ್ಟುಹಬ್ಬವನ್ನ ವ್ಯಾಸನಮುಕ್ತ ದಿನಾಚರಣೆಯಾಗಿ ಆಚರಣೆ ಮಾಡುತ್ತಿದ್ದೇವೆ ಇಂದಿನ ಯುವಕರು ಹಲವು ದುಚ್ಚಟಗಳಿಗೆ ಬಲಿಯಾಗಿದ್ದಾರೆ ಇಂದಿನಿಂದ ಅವುಗಳನ್ನ ತೇಜಿಸಿ ಶ್ರೀಗಳು ತೋರಿಸಿದ ಮಾರ್ಗದೆಡೇಗೆ ನಡೆಯಲಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕ ಕ ಸಾ ಪ ಅಧ್ಯಕ್ಷ ಮಲ್ಲಿಕಾರ್ಜುನ ಗೌಡೂರ ಮಾತನಾಡಿ ಬಸವ ತತ್ವದ ಪ್ರತಿಪಾದಕರಾದ ಡಾ ಮಹಾಂತ ಶಿವಯೋಗಿಗಳ ಮಹಾಂತ ಜೋಳಿಗೆ ಎಂಬ ವಿನೂತನ ಕಾರ್ಯಕ್ರಮ ಸಮಾಜದಲ್ಲಿಯ ಜನರು ದುಶ್ಚಟಗಳಿಂದ ಮುಕ್ತಿ ನೀಡಬೇಕೆಂಬ ಮಹದಾಸೆಯಿಂದ ಜಾರಿಗೆ ತಂದು ಸಾವಿರಾರು ಜನರ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕಂಡು ಅವರನ್ನು ವ್ಯಸನ ಮುಕ್ತರನ್ನಾಗಿ ಮಾಡಿದಿದಾರೆ ಆ ದಾರಿಯಲ್ಲಿ ಇಂದು ಘನ ಸರ್ಕಾರ ಅವರ ಜನ್ಮ ದಿನವನ್ನು ವ್ಯಸನ ಮುಕ್ತ ದಿನವನ್ನಾಗಿ ಆಚರಣೆ ಮಾಡಲು ಆದೇಶಿಸಿರುವದು ಅತ್ಯಂತ ಶ್ಲಾಘನೀವಾಗಿದೆ ಶಾಲೆ ಕಾಲೇಜು ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಕಸಪಾ ಘಟಕಧ್ಯಕ್ಷ ಬಸವರಾಜ ಖೈರವಾಡಗಿ, ಸಂಗಮೇಶ ಗಣಾಚಾರಿ
ಯಮನೂರ ನದಾಫ, ಹಾಜಿಮಲಂಗ ಬಾಬಾ, ಮಹಾಂತೇಶ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಇದ್ದರು.