Tuesday , September 17 2024
Breaking News
Home / Breaking News / ಕುಷ್ಟಗಿ ಸರ್ಕಲ್ ಇನ್ಸಫೆಕ್ಟರ್ ನಿಂಗಪ್ಪ ಎನ್. ರುದ್ರಪ್ಪಗೋಳ, ವರ್ಗಾವಣೆ..!

ಕುಷ್ಟಗಿ ಸರ್ಕಲ್ ಇನ್ಸಫೆಕ್ಟರ್ ನಿಂಗಪ್ಪ ಎನ್. ರುದ್ರಪ್ಪಗೋಳ, ವರ್ಗಾವಣೆ..!

ವರದಿ ಎನ್ ಶಾಮೀದ್ ತಾವರಗೇರಾ

ಕೊಪ್ಪಳ:- ಜಿಲ್ಲೆಯ ಕುಷ್ಟಗಿ ವೃತ್ತದಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಿಪಿಐ ನಿಂಗಪ್ಪ ಎನ್. ರುದ್ರಪ್ಪಗೋಳ ಅವರು ಇದೀಗ ರಾಯಚೂರು ಜಿಲ್ಲೆಯ ಯರಗೇರಾ ವೃತ್ತಕ್ಕೆ ವರ್ಗಾವಣೆಗೊಂಡಿದ್ದಾರೆ.

ಆಗಸ್ಟ್  01ರಂದು ಮಂಗಳವಾರ ದಿನ ರಾಜ್ಯದ 211 ಪೊಲೀಸ್ ಇನ್ಸ್ಪೆಕ್ಟರ್’ಗಳನ್ನು ಪೊಲೀಸ್ ಇಲಾಖೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಅದರಂತೆ ಕುಷ್ಟಗಿ ವೃತ್ತದ ಸಿಪಿಐ ಅವರು ವರ್ಗಾವಣೆಯಾಗಿದ್ದಾರೆ.

ಕುಷ್ಟಗಿ ವೃತ್ತಕ್ಕೆ ಬಳ್ಳಾರಿ ಜಿಲ್ಲೆಯ ಶಿರಗುಪ್ಪಾ ವೃತ್ತದ ಯಶವಂತ ಹಣಮಂತ ಬಿಸನಳ್ಳಿ ಅವರನ್ನು ನಿಯೋಜಿಸಿ ತಕ್ಷಣ ಸೂಚಿಸಿದೆ, ಸ್ಥಳಕ್ಕೆ ಕರ್ತವ್ಯಕ್ಕೆ ಹಾಜರಾಗುವಂತೆ ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ರವರ ಪರವಾಗಿ ಐಪಿಎಸ್ ಸೌಮೆಂದು ಮುಖರ್ಜಿ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!