ವರದಿ ಎನ್ ಶಾಮೀದ್ ತಾವರಗೇರಾ
ಕನಕಗಿರಿ: ಶಾಲಾ ಕಾಲೇಜು ಹಾಗೂ ಸಾರ್ವಜನಿಕ ಗೋಡೆಗಳ ಮೇಲೆ ಹೆಣ್ಣುಮಕ್ಕಳ ಬಗ್ಗೆ ಅಶ್ಲೀಲ ವಾಗಿ ಬರೆಯುತ್ತಿದ್ದ ಆರೋಪಿಯನ್ನು ಕೊನೆಗು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಪಟ್ಟಣದ ಮೆಹೆಬೂಬ ಹಸನಸಾಬ ಎಂದು ಗುರುತಿಸಲಾಗಿದೆ.
ಈ ಪ್ರಕರಣವನ್ನು ಸಾಮಾಜಿಕ ಜಾಲತಾಣ ಹಾಗೂ ಸುದ್ದಿ ಮಾಧ್ಯಮ ಗಳಲ್ಲಿ ಗಂಭೀರ ಸ್ವರೂಪವನ್ನು ಪಡೆದಿದ್ದು , ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು , ಪ್ರಕರಣ ಅತೀ ಸುಕ್ಷ್ಮವಾಗಿದ್ದರಿಂದ ಆರೋಪಿತನ ಪತ್ತೆಗೆ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಯಶೋದಾ ವಂಟಗೋಡಿ ಮಾರ್ಗದರ್ಶನದಲ್ಲಿ ಗಂಗಾವತಿ ಡಿವಾಯ್ ಎಸ್ ಪಿ ಆರ್ ಎಸ್ ಉಜ್ಜನಕೊಪ್ಪ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು,
ಈ ಕುರಿತು ತನಿಖೆ ನಡೆಸಿದ ತಂಡವು ಅನುಮಾನಸ್ಪದವಾಗಿ ಕಂಡು ಬಂದ ಪಟ್ಟಣದ ಮೆಹೆಬೂಬ (27) ನನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಅದೇ ಪಟ್ಟಣದ ಅಪ್ರಾಪ್ತ ಬಾಲಕಿಯನ್ನು 2 ವರ್ಷದಿಂದ ಪ್ರಿತಿಸುತ್ತಿದ್ದು ,ಕೆಲವೊಮ್ಮೆ ಬಾಲಕಿ ಮಾತನ್ನು ನಿಲ್ಲಿಸಿದಾಗ ಗೋಡೆ ಮೇಲೆ ಅಶ್ಲೀಲ ವಾಗಿ ಬರೆದಿದ್ದರಿಂದ ಆಕೆಯು ಮಾತನಾಡುವುದು ಮತ್ತು ಸಂದೇಶ ಕಳುಹಿಸುವುದನ್ನು ನೋಡಿ ಅಪ್ರಾಪ್ತ ಬಾಲಕಿ , ಮತ್ತೊಮ್ಮೆ ಗೋಡೆಯ ಮೇಲೆ ಹೆಚ್ಚು ,ಹೆಚ್ಚು ಬರೆಯಲು ಪ್ರಾರಂಭಿಸಿದ್ದಾನೆ.
ನಂತರ ಬಾಲಕಿಯು ನಿನು ಬಡವನಾಗಿದ್ದರಿಂದ ನಮ್ಮ ಮನೆಯಲ್ಲಿ ಸರ್ಕಾರಿ ನೌಕರಿ ಮಾಡುವ ಹುಡುಗನಿಗೆ ಮದುವೆ ಮಾಡುತ್ತೆವೆಂದು ಹೇಳಿದ್ದು, ನೀನು ನನ್ನೊಂದಿಗೆ ಮಾತನಾಡಬೇಡ ಎಂಬ ಬಾಲಕಿಯ ಹೇಳಿಕೆಯಿಂದಾಗಿ ಕುಪಿತ ಗೊಂಡ ಆರೋಪಿಯು ಅವಳು ಯಾರ ಜೊತೆಯು ಮಾತನಾಡಬಾರದು ಮತ್ತು ಯಾರ ಜೊತೆಯು ಓಡಾಡಬಾರದೆಂದು ಬಾಲಕಿಯ ಸ್ನೇಹಿತರಿಗೆ ಮತ್ತು ಅವರ ಅಕ್ಕಂದಿರ ಹಾಗೂ ಬಾಲಕಿಯೊಂದಿಗೆ ಓದುತ್ತಿದ್ದ ಹುಡುಗರ ಹೆಸರು ಗಳನ್ನು ಗೋಡೆ ಮೇಲೆ ಬರೆದು ಇನ್ಸ್ಟಾಗ್ರಾಮ್ ಮೂಲಕ ಅಶ್ಲೀಲ ಚಿತ್ರಗಳನ್ನು ಎಡಿಟ್ ಮಾಡಿ ಬಾಲಕಿಯ ಪಾಲಕರ ಮತ್ತು ಸ್ನೇಹಿತರ ಗುಂಪುಗಳಿಗೆ ಕಳುಹಿಸಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ, ನಕಲಿ ಇನ್ಸ್ಟಾಗ್ರಾಮ್ ಖಾತೆ ಸೃಷ್ಟಿಸಿ ಈ ಕೃತ್ಯ ಎಸಗಿದ್ದು ತಿಳಿದಿದ್ದರಿಂದ ,ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಕನಕಗಿರಿ ಪಿಎಸ್ ಐ ಜಗದೀಶ್ ಕೆಜಿ, ಗವಿಸಿದ್ದಯ್ಯ, ಗವಿಕುಮಾರ, ಬಸವರಾಜ, ಪಿಐ ಅಮರೇಶ ಹುಬ್ಬಳ್ಳಿ , ಬಸವರಾಜ ಅಂಗಡಿ, ಸವಿತಾ ಸಜ್ಜನ, ಕೊಟೇಶ ಹಾಗೂ ಪ್ರಸಾದ ಇವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತ ಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.