ನಾಗರಾಜ ಎಸ್ ಮಡಿವಾಳರ
ಮುದಗಲ್ : ಐತಿಹಾಸಿಕ ಮುದಗಲ್ ಮೊಹರಂ ಬುಧವಾರ ಪ್ರಾರಂಭವಾಗಿದ್ದು, ಪಟ್ಟಣದ ಎಲ್ಲ ದರ್ಗಾಗಳಲ್ಲಿ ಆಲಂಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎಂದು ಹುಸೇನಿ ಆಲಂ ದರ್ಗಾ ಸಮಿತಿಯ ಕಾರ್ಯದರ್ಶಿ ಮೊಹ್ಮದ್ ಸಾಧಿಕ್ ಅಲಿ ಪತ್ರಿಕೆಗೆ ತಿಳಿಸಿದ್ದಾರೆ.
ಪಟ್ಟಣದ ಹುಸೇನಿ ಆಲಂ ದರ್ಗಾದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ಬುಧವಾರದಿಂದ ನಾಡಿನೆಲ್ಲೆಡೆ ಪ್ರಸಿದ್ದಿ ಪಡೆದ ಮುದಗಲ್ ಮೊಹರಂ ಹಬ್ಬಕ್ಕೆ ಚಾಲನೆ ದೊರಕಲಿದೆ. 10 ದಿನಗಳವರೆಗೆ ಕಾರ್ಯಕ್ರಮ ಜರುಗಲಿವೆ ಮೊಹರಂ 3 ನೇ ದಿನವಾದ ಜೂ.22 ಶನಿವಾರ ಮತ್ತು ಜೂ.23 ರವಿವಾರ ರಂದು ಹೊರ ರಾಜ್ಯ, ಜಿಲ್ಲೆಗಳಿಂದ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.5ನೇ ದಿನವಾದ ಜೂ. 24 ಸೋಮವಾರ ರಂದು ಔಹಾಲ ಕಾರ್ಯಕ್ರಮ(ರಾತ್ರಿ 1 ಗಂಟೆಯಿಂದ),
7ನೇ ದಿನವಾದ ಜೂ.26 ರಂದು
ಬುಧವಾರ ಖಾಸಿಂ ಪೀರಾ ಸವಾರಿ, 8ನೇ ದಿನವಾದ ಜೂ.27 ರಂದು ಗುರುವಾರ ಮೌಲಾಲಿ ಸವಾರಿ,9ನೇ ದಿನವಾದ ಜೂ.28 ರಂದು ಶುಕ್ರವಾರ ಹಸೇನ್ ಹುಸೇನ್ ಸವಾರಿ (ಕತ್ತಲ ರಾತ್ರಿ )10ನೇ ದಿನವಾದ ಜೂ.29 ರಂದು ಶನಿವಾರ ಸಾರ್ವತ್ರಿಕವಾಗಿ ಪಟ್ಟಣದ ಎಲ್ಲ ಆಲಂಗಳನ್ನು ಚಾವಡಿ ಕಟ್ಟೆಯ ಹಿಂದಿನ ಆವರಣದಲ್ಲಿ ಆಲಂಗಳ ಭೇಟಿ,12ನೇ ದಿನವಾದ ಜೂ.31 ರಂದು ಸೋಮವಾರ ಜಿಯಾಂತ್ ಮೂಲಕ ಮೊಹರಂನ ಕೊನೆಯ ದಿನವನ್ನಾಗಿ ಆಚರಿಸಲಾಗುವುದು ಎಂದು ಹುಸೇನಿ ಆಲಂ ದರ್ಗಾ ಸಮಿತಿಯ ಅಧ್ಯಕ್ಷ ಅಮೀರ್‌ಬೇಗ್ ಉಸ್ತಾದ,ಮಾಶುಮ್ ಷರೀಫ್, ನೈಮತ್
ಖಾದ್ರಿ, ರಘುವೀರ್ ಚಲುವಾದಿ, ಇಸ್ಮಾಯಿಲ್ ಬಾರಿಗಿಡ,ಯಮನೂರ ನದಾಫ್ ಸೇರಿದಂತೆ ಸಮಿತಿಯ ಸದಸ್ಯರು ಮಾಹಿತಿ ನೀಡಿದರು.