ವರದಿ ಎನ್ ಶಾಮೀದ್ ತಾವರಗೇರಾ
ಗಂಗಾವತಿ:- ತಾಲೂಕಿನ ಕಿಷ್ಕಿಂದೆಯ ಅಂಜನಾದ್ರಿ ಪರ್ವತದಿಂದ ಗಂಗಾವತಿ ಮೂಲದ ಯುವಕ ರಾಮ ಜನ್ಮ ಭೂಮಿ ಅಯೋಧ್ಯೆ ವರೆಗೆ ಸೈಕಲ್ ಯಾತ್ರೆ ಕೈಗೊಂಡಿದ್ದು , ಸಾವಿರಾರು ಕಿಲೋಮೀಟರ್ ದೂರದ ವರೆಗೆ ಸೈಕಲ್ ಯಾತ್ರೆ ಕೈಗೊಂಡ ಯುವಕನ ಸಾಹಸದ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸುವುದರ ಜೊತೆಗೆ ಶುಭ ಹಾರೈಸಿದ್ದಾರೆ, ಯುವಕನು ಪಟ್ಟಣದ ತುಳಸಪ್ಪ ಚತ್ರದ ನಿವಾಸಿಯಾದ ರಾಜು ಎಂಬ ಯುವಕನೆ ಒಬ್ಬಂಟಿ ಯಾಗಿ ಸೈಕಲ್ ಯಾತ್ರೆ ಕೈಗೊಂಡಿದ್ದಾನೆ , ಜುಲೈ 01, ಶನಿವಾರದಂದು ಅಂಜನಾದ್ರಿ ಪರ್ವತದಲ್ಲಿ ಪೂಜೆ ಸಲ್ಲಿಸಿ , ಸೈಕಲ್ ಯಾತ್ರೆ ಕೈಗೊಳ್ಳುತ್ತಾನೆ.
ಗಂಗಾವತಿ ನಗರದಿಂದ ತಾವರಗೇರಾ , ಲಿಂಗಸಗೂರ, ಕಲಬುರ್ಗಿ, ಬಸವಕಲ್ಯಾಣ ಮಾರ್ಗವಾಗಿ, ಮಹಾರಾಷ್ಟ್ರ ಕ್ಕೆ ತಲುಪಿ ನಂತರ ಉತ್ತರ ಪ್ರದೇಶದ ಅಯೋಧ್ಯೆಯ ಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರಕ್ಕೆ ತೆರಳಲಿದ್ದಾನೆ.
ನಂತರ ಸೈಕಲ್ ಮೂಲಕವೇ ಕೇದಾರನಾಥ, ಬದರಿನಾಥ, ಜಮ್ಮುವಿನ ಲಡಾಖ್ ಗು ಕೂಡ ಪ್ರಯಾಣ ಬೆಳೆಸಲು ಮುಂದಾಗಿದ್ದಾನೆ, ಈ ಯಾತ್ರೆಯು ಯಶಸ್ವಿಯಾಗಲೆಂದು ಪಟ್ಟಣದ ಯುವ ಮಿತ್ರರು ಸೇರಿದಂತೆ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತಿರ್ಥ ಪಾದಂಗಳ್ಳನವರ ಶುಭ ಹಾರೈಸಿದ್ದಾರೆ.