ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:- ಸಿಬ್ಬಂದಿಗಳ ಕೊರತೆಯಿಂದಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಈ ಬಗ್ಗೆ ಹಲವಾರು ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದರು ಕೂಡ ಯಾವುದೇ ಪ್ರಯೋಜನವಾಗಿಲ್ಲವೆಂದು ಸ್ಥಳೀಯ ಕೆಇಬಿ ಎಸ್ ಓ ರಶ್ಮಿ ಗಳಗಳನೆ ಅತ್ತಪ್ರಸಂಗ ಬುಧವಾರ ಸ್ಥಳೀಯ ಕೆಇಬಿ ಕಚೇರಿಯ ಮುಂದೆ ಸಿಬ್ಬಂದಿಗಳೊಂದಿಗೆ ಪ್ರತಿಭಟನೆ ನಡೆಸಿ ತಮ್ಮ ದುಃಖವನ್ನು ವ್ಯಕ್ತಪಡಿಸಿದರು.
ಕಳೆದ ಮೂರು ತಿಂಗಳಿಂದ ಪಟ್ಟಣ ಸೇರಿದಂತೆ ಹೋಬಳಿಯ 48 ಹಳ್ಳಿಗಳಲ್ಲಿ ಕೇವಲ ಏಳು ಲೈನ್ ಮನ್ ಗಳು ಮಾತ್ರ ಕೆಲಸ ಮಾಡಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಿಬ್ಬಂದಿಗಳ ಕೊರತೆ ಸೇರಿದಂತೆ ಸ್ಥಳೀಯವಾಗಿ ಕೂಡ ನಾಲ್ಕು ಜನ ಲೈನ್ ಮನ್ ಗಳ ಅವಶ್ಯಕತೆ ಇದೆ, ಈ ಬಗ್ಗೆ ಹಲವಾರು ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಈ ಬಗ್ಗೆ ಕುಷ್ಟಗಿಯ ಎ ಡಬ್ಲ್ಯೂ ಅವರನ್ನು ಕೇಳಿದಾಗ ತಾವರಗೇರಿಯಲ್ಲಿ ಸಿಬ್ಬಂದಿಗಳ ಕೊರತೆ ಇರುವುದು ತಿಳಿದು ಬಂದಿದೆ ಕೆಲವೇ ದಿನಗಳಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದೆಂದು ತಿಳಿಸಿದರು.
ಸಿಬ್ಬಂದಿಗಳ ಗೋಳು ಕೇಳೊರಿಲ್ಲ:– ಈ ಬಗ್ಗೆ ಸಿಬ್ಬಂದಿ ಬೀರಪ್ಪ ಮಾತನಾಡಿ ಮನೆಯಲ್ಲಿ ಸತ್ತರು ಕೂಡ ಮಣ್ಣಿಗೆ ಹೋಗುವ ಪರಿಸ್ಥಿತಿ ಇಲ್ಲ ನಮಗೆ ರಜೆ ನೀಡದೇ ಕೆಲಸ ಮಾಡುವಂತೆ ಮೇಲಾಧಿಕಾರಿಗಳು ಒತ್ತಡ ಏರುತ್ತಿದ್ದಾರೆ, ಇದರಿಂದಾಗಿ ಎಲ್ಲಾ ಸಿಬ್ಬಂದಿಗಳು ಕೂಡ ಮನನೊಂದಿದ್ದಾರೆಂದು ತಮ್ಮ ಅಳಲನ್ನು ತೋಡಿಕೊಂಡರು.
ಸ್ಥಳೀಯ ಸಂಘಟನೆಗಳ ಮುಖಂಡರು ಮಾತನಾಡಿ ಈಗಿರುವ ಎಸ್ ಓ ರಶ್ಮಿ ಅವರು ಇಲ್ಲಿಗೆ ಬಂದಾಗಿನಿಂದ ತಮ್ಮ ಸಿಬ್ಬಂದಿಗಳೊಂದಿಗೆ ಉತ್ತಮ ಕೆಲಸ ಮಾಡುತ್ತಿದ್ದರು ಕೂಡ ಈಗ ಸಿಬ್ಬಂದಿ ಕೊರತೆಯಿಂದಾಗಿ ಸಾರ್ವಜನಿಕರ ಟೀಕೆಗೆ ಗುರಿ ಆಗಬೇಕಾಗಿದೆ ಈ ಬಗ್ಗೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಸಂಘ ಸಂಸ್ಥೆಗಳಿಂದ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಸಾಗರ ಭೇರಿ, ಕಳಕನ ಗೌಡ ಪಾಟೀಲ್, ಚೆನ್ನಪ್ಪ ನಾಲತವಾಡ ಸೇರಿದಂತೆ ಇನ್ನಿತರರು ಕೂಡ ಕೆಇಬಿ ಸಿಬ್ಬಂದಿಗೆ ಬೆಂಬಲ ಸೂಚಿಸಿದರು.