ವರದಿ ಎನ್ ಶಾಮೀದ್ ತಾವರಗೇರಾ
ಕುಷ್ಟಗಿ:- ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ಪಾಲಿಶ್ ಮಾಡಲಾಗುವುದೆಂದು ನಂಬಿಸಿ ಮಹಿಳೆಯರ ಬಂಗಾರದ ಆಭರಣ ( ನೆಕ್ ಲೇಸ್) ಕದ್ದು ಪರಾರಿಯಾದ ಘಟನೆ ಪಟ್ಟಣದ ತೆಗ್ಗಿನ ಓಣಿಯಲ್ಲಿ ನಡೆದಿದೆ.
ತೆಗ್ಗಿನ ಓಣಿಯ ನಿವಾಸಿ ಬಾಬಾಸಾಬ ಮುಲ್ಲಾ ಅವರ ಮನೆಗೆ ಅಪರಿಚಿತರು ಆಗಮಿಸಿ ಮನೆಯಲ್ಲಿದ್ದ ಹೆಣ್ಣು ಮಕ್ಕಳಿಂದ ಬೆಳ್ಳಿ ಆಭರಣ ಪಡೆದು ಪಾಲಿಶ್ ಮಾಡಿ ನಂತರ ಅದು ಹೊಳಪು ಬರುವಂತೆ ಮಾಡಿ, ಅವರ ವಿಶ್ವಾಸ ಗಳಿಸಿಕೊಂಡಾಗ, ಅದಕ್ಕೆ ಮಾರುಹೋದ ಮಹಿಳೆಯರು ತಮ್ಮ ಮನೆಯಲ್ಲಿದ್ದ 2 ತೊಲೆ ನೆಕ್ ಲೇಸ್ ಅನ್ನು ಪಡೆದುಕೊಂಡು ಪಾಲಿಶ್ ಮಾಡುವಂತೆ ನಟಿಸಿ ಬಂಗಾರ ಕಳ್ಳತನ ಮಾಡಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
ನಂತರ ಬಂಗಾರ ಕಳೆದುಕೊಂಡವರು ಸ್ಥಳೀಯ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಕಳ್ಳತನ ಮಾಡಿ ದ್ವಿಚಕ್ರ ವಾಹನ (ಬೈಕ್) ನಲ್ಲಿ ಪರಾರಿಯಾದ ಬಗ್ಗೆ ತೆಗ್ಗಿನ ಓಣಿಯ ಮಸೀದಿಯೊಂದರ ಸಿಸಿಟಿವಿ ಯಲ್ಲಿ ದಾಖಲಾಗಿದೆ.