ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಗಳು ನಷ್ಟವಾದ ಘಟನೆ ಸಮೀಪದ ಮೆಣೇಧಾಳ ಗ್ರಾಮದ ಜಮೀನೊಂದರಲ್ಲಿ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಘಟನೆ ವಿವರ: ಕೇಶವರಡ್ಡಿ ಅವರಿಗೆ ಸೇರಿದ ಜಮೀನಿನ ಶೆಡ್ ನಲ್ಲಿ ಸಂಗ್ರಹಿಸಲಾಗಿದ್ದ ಹುಲ್ಲು, ಹಾಗೂ ವಿದ್ಯುತ್ ಉಪಕರಣಗಳು ಸೇರಿದಂತೆ ಎಲ್ಲವು ಸುಟ್ಟು ಕರಕಲಾಗಿದ್ದು ಅಂದಾಜು 2 ಲಕ್ಷ 30 ಸಾವಿರ ರೂ ನಷ್ಟವಾಗಿದೆ ಎಂದು ತಿಳಿದು ಬಂದಿದೆ.
ತಪ್ಪಿದ ಬಾರಿ ಅನಾಹುತ:- ಶೆಡ್ ಗೆ ಬೆಂಕಿ ತಗುಲಿದ್ದನ್ನು ಕಂಡ ಜನರು ಬೆಂಕಿ ಆರಿಸಲು ಪ್ರಯತ್ನ ಪಟ್ಟಾಗ ಅಲ್ಲಿಗೆ ಆಗಮಿಸಿದ ಪೊಲೀಸ್ ಸಿಬ್ಬಂದಿಗಳಾದ ಬಸವರಾಜ ಇಂಗಳದಾಳ, ಗುಂಡಪ್ಪ ಶೆಡ್ ಮೇಲಿರುವ ವಿದ್ಯುತ್ ಲೈನ್ ಅನ್ನು ಗಮನಿಸಿ ತಕ್ಷಣವೇ ಕೆಇಬಿ ಗೆ ಕರೆ ಮಾಡಿ ವಿದ್ಯುತ್ ಸ್ಥಗಿತಗೊಳಿಸಿದ್ದಾರೆ, ಒಂದು ವೇಳೆ ವಿದ್ಯುತ್ ತಂತಿ ಹರಿದು ಬಿದ್ದಿದ್ದಲ್ಲಿ ಬಾರಿ ಅನಾಹುತ ವಾಗುವ ಸಂಭವವಿತ್ತು , ಆದರೆ ಪೊಲೀಸ್ ರ ಸಮಯ ಪ್ರಜ್ಞೆ ಯಿಂದಾಗಿ ಅನಾಹುತ ತಪ್ಪಿದಂತಾಗಿದೆ.
ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.