ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಸಮೀಪದ ಕಳಮಳ್ಳಿ ತಾಂಡಾದಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ವಿದ್ಯುತ್ ಅವಘಡ ದಲ್ಲಿ 12 ಜಾನುವಾರುಗಳು ಮೃತಪಟ್ಟ ಘಟನೆ ಜರುಗಿದೆ.
ರಾಮಪ್ಪ ಲಚಮಪ್ಪ ಪವಾರ ಇವರಿಗೆ ಸೇರಿದ 10 ಜಾನುವಾರು, ಫಕೀರಪ್ಪ ಪವಾರ ಇವರಿಗೆ ಸೇರಿದ 2 ಜಾನುವಾರು ಎಂದು ಗುರುತಿಸಲಾಗಿದೆ.
ಜಮೀನುನಲ್ಲಿಯ ತೋಟದ ಲೈನ ಕಂಬದ ತಂತಿ ಹರಿದು ಬಿದ್ದು ಮನೆ ಅಂಗಳದಲ್ಲಿ ಕಟ್ಟಿದ್ದ ಜಾನುವಾರುಗಳ ಮೇಲೆ ಬಿದ್ದ ಪರಿಣಾಮ ಈ ಘಟನೆ ಸಂಭವಿಸಿದ್ದು ಇದಕ್ಕೆ ಜೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾ ಸರಿಯಾದ ಸಮಯಕ್ಕೆ ಇಲಾಖೆ ಅಧಿಕಾರಿಗಳು ಸ್ಪಂದಿಸಿದ್ದರೇ ಈ ಘಟನೆ ಸಂಭವಿಸುತ್ತಿರಲಿಲ್ಲವೆಂದು ತಾಂಡಾದ ನಿವಾಸಿಗಳಾದ ಗೋಪಣ್ಣ ಪವಾರ, ಪಿಕಲೆಪ್ಪ ಪವಾರ, ಶಂಕ್ರಪ್ಪ ರಾಠೋಡ್, ಕೃಷ್ಣಪ್ಪ ಪವಾರ, ಹನುಮಪ್ಪ ಚಂದಪ್ಪ ರಾಠೋಡ ಆರೋಪ ಮಾಡಿ ವಿದ್ಯುತ್ ಕಂಬಕ್ಕೆ ಬೆಂಕಿ ಹತ್ತಿದಾಗ ಲೈನ ಮನ್ ಗೆ ಕರೆ ಮಾಡಿ ತಿಳಿಸಿದರು ಕೂಡ ನಿರ್ಲಕ್ಷ್ಯ ವಹಿಸಿದ್ದು, ಈ ರೀತಿ ಅನಾಹುತ ಆಗುವದನ್ನು ತಪ್ಪಿಸಬಹುದಿತ್ತು ಎಂದು ಆರೋಪಿಸಿದರು.
ಘಟನಾ ಸ್ಥಳಕ್ಕೆ ಪಿಎಸ್ ಐ ತಿಮ್ಮಣ್ಣ ನಾಯಕ, ಕಂದಾಯ ಇಲಾಖೆ, ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳಕ್ಕೆ ಭೇಟಿ:- ವಿಷಯ ತಿಳಿಯುತ್ತಿದ್ದಂತೆ ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಭೇಟಿ ನೀಡಿ ಪರಿಶೀಲನೆ ನಡೆಸಿ ಘಟನೆ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು, ಮುಖಂಡರಾದ ಬಸನಗೌಡ ಮಾಲಿಪಾಟೀಲ್, ಉಮೇಶ ರಾಠೋಡ್, ಲಿಂಗರಾಜ ಹಂಚಿನಾಳ, ವಿರೇಶ ತಾಳಿಕೋಟಿ ಸೇರಿದಂತೆ ಇನ್ನಿತರರು ಭೇಟಿ ನೀಡಿದರು.
ಜೆಸ್ಕಾಂ ವತಿಯಿಂದ ಪ್ರತಿ ಜಾನುವಾರು ಗಳಿಗೆ 50 ಸಾವಿರದಂತೆ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಯಿತು.